ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರೀ ಹಿಮಪಾತ: 100 ಸಾವು

Update: 2020-01-16 16:40 GMT
file photo

ಮುಝಫ್ಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರ), ಜ. 16: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆಯಲ್ಲಿ ಸೋಮವಾರ ನೀರ್ಗಲ್ಲು ಉರುಳಿ 74 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ.

ನೀರ್ಗಲ್ಲು ದಾಳಿಗೆ ಮೂರು ಮಹಡಿಯ ಮನೆಯೊಂದು ಹೂತುಹೋಗಿದ್ದು ಅಲ್ಲಿದ್ದ ಕನಿಷ್ಠ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

“ನಾನು ಮತ್ತು ನನ್ನ ಕುಟುಂಬ ಸದಸ್ಯರು ಬೆಂಕಿಯ ಸುತ್ತ ಕುಳಿತು ಮೈಬಿಸಿಮಾಡಿಕೊಳ್ಳುತ್ತಿದ್ದಾಗ ಯಾವುದೇ ಸುಳಿವು ನೀಡದೆ ಕಣ್ಣು ಮುಚ್ಚುವುದರೊಳಗೆ ನೀರ್ಗಲ್ಲು ಅಪ್ಪಳಿಸಿತು” ಎಂದು ಆ ಮನೆಯಿಂದ ಬದುಕಿ ಹೊರಬಂದ ಮಹಿಳೆಯೊಬ್ಬರು ತಿಳಿಸಿದರು.

ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಕಳೆದ ಮೂರು ದಿನಗಳಲ್ಲಿ ಹಿಮಪಾತದಿಂದಾಗಿ ಸಂಭವಿಸಿದ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 100ನ್ನು ತಲುಪಿದೆ ಎಂದು ಪಾಕಿಸ್ತಾನದ ವಿಪತ್ತು ನಿರ್ವಹಣೆ ಪ್ರಾಧಿಕಾರ ಹೇಳಿದೆ.

ಈ ವಲಯದಲ್ಲಿ ಶುಕ್ರವಾರದಿಂದ ಇನ್ನೂ ಹೆಚ್ಚಿನ ಹಿಮಪಾತವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News