ಟೀಮ್‌ಇಂಡಿಯಾಕ್ಕೆ ರಾಜ್‌ಕೋಟ್ ಅದೃಷ್ಟದ ಮೈದಾನವಲ್ಲ

Update: 2020-01-16 17:58 GMT

ರಾಜ್‌ಕೋಟ್, ಜ.16: ಆತಿಥೇಯ ಭಾರತ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ದಾಖಲೆ ಹೊಂದಿದೆ. ಈ ಮೈದಾನದಲ್ಲಿ ಈ ಹಿಂದೆ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ. ಭಾರತ 2013ರ ಜ.11ರಂದು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದು, ಆ ಪಂದ್ಯವನ್ನು 9 ರನ್‌ನಿಂದ ಸೋತಿತ್ತು. ಆ ಬಳಿಕ ಇದೇ ಮೈದಾನದಲ್ಲಿ 2015ರ ಅಕ್ಟೋಬರ್ 18ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಆಡಿದ್ದು ಆ ಪಂದ್ಯವನ್ನು 18 ರನ್‌ಗಳಿಂದ ಸೋತಿತ್ತು. ಇದೀಗ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ವಿರಾಟ್ ಕೊಹ್ಲಿ ಪಡೆಗೆ ಈ ಅಂಕಿ-ಅಂಶದಲ್ಲಿನ ಹಿನ್ನಡೆ ಚಿಂತೆಗೀಡು ಮಾಡಿದೆ. ಇದೇ ವೇಳೆ, ಆಸ್ಟ್ರೇಲಿಯ ರಾಜ್‌ಕೋಟ್‌ನಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. 1986ರ ಅಕ್ಟೋಬರ್ 7ರಂದು ಆಸ್ಟ್ರೇಲಿಯ ಏಕೈಕ ಪಂದ್ಯವನ್ನು ಆಡಿದ್ದು, ಆ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News