ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ: ಸಾನಿಯಾ ಫೈನಲ್‌ಗೆ

Update: 2020-01-17 06:14 GMT

ಹೊಬರ್ಟ್, ಜ.17: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಸಾನಿಯಾ ಶುಕ್ರವಾರ ಒಂದು ಗಂಟೆ ಹಾಗೂ 24 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಜೊತೆಗಾರ್ತಿ ನಾಡಿಯ ಕಿಚೆನೊಕ್‌ರೊಂದಿಗೆ ಸ್ಲೋವಾನಿಯ-ಝೆಕ್ ಜೋಡಿ ತಾಮಾರಾ ಝಿಡ್ನಾಸೆಕ್ ಹಾಗೂ ಮೇರಿ ಬೌಝಕೊವಾರನ್ನು 7-6(3), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಐದನೇ ಶ್ರೇಯಾಂಕದ ಸಾನಿಯಾ-ನಾಡಿಯಾ ಫೈನಲ್‌ನಲ್ಲಿ ಚೀನಾದ ಎರಡನೇ ಶ್ರೇಯಾಂಕದ ಶುಐ ಪೆಂಗ್ ಹಾಗೂ ಶುಐ ಝಾಂಗ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂನ ಕ್ರಿಸ್ಟಿನ್ ಫ್ಲಿಪ್‌ಕೆನ್ಸ್ ಹಾಗೂ ಅಲಿಸನ್ ವ್ಯಾನ್ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಚೀನಾದ ಜೋಡಿ ಫೈನಲ್‌ಗೆ ವಾಕ್‌ಓವರ್ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News