ದ್ವಿತೀಯ ಏಕದಿನ: ಆಸ್ಟ್ರೇಲಿಯ ಗೆಲುವಿಗೆ 341 ರನ್ ಗುರಿ

Update: 2020-01-17 12:00 GMT

ರಾಜ್‌ಕೋಟ್, ಜ.17: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್(96, 90 ಎಸೆತ,13 ಬೌಂಡರಿ,1 ಸಿಕ್ಸರ್),ಕೆ.ಎಲ್.ರಾಹುಲ್(80, 52 ಎಸೆತ, 6 ಬೌಂಡರಿ,3 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ(78, 76 ಎಸೆತ, 6 ಬೌಂಡರಿ)ಆಕರ್ಷಕ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ತಂಡಕ್ಕೆ ದ್ವಿತೀಯ ಏಕದಿನ ಪಂದ್ಯ ಗೆಲ್ಲಲು 341 ರನ್ ಕಠಿಣ ಗುರಿ ನೀಡಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(42,44 ಎಸೆತ)ಹಾಗೂ ಧವನ್(96)ಮೊದಲ ವಿಕೆಟ್‌ಗೆ 81 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ರೋಹಿತ್ ಔಟಾದ ಬಳಿಕ ಧವನ್ ಹಾಗೂ ಕೊಹ್ಲಿ ಎರಡನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ ಕೊನೆಯ ಓವರ್‌ನಲ್ಲಿ ರನೌಟಾಗುವ ಮೊದಲು 81 ರನ್ ಗಳಿಸಿ ತಂಡದ ಮೊತ್ತವನ್ನು 340ಕ್ಕೆ ತಲುಪಿಸಿದರು.

ಆಸ್ಟ್ರೇಲಿಯದ ಪರ ಸ್ಪಿನ್ನರ್ ಆ್ಯಡಮ್ ಝಾಂಪ(3-50) ಹಾಗೂ ರಿಚರ್ಡ್ಸ್‌ಸನ್(2-73)ಐದು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News