ಅಂತರ್ ಕಾಲೇಜ್ ಸ್ಪರ್ಧೆ ‘ಪಾದುವ ವರ್ವ್-2020’

Update: 2020-01-18 06:26 GMT

ಮಂಗಳೂರು, ಜ.18: ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ವತಿಯಿಂದ ಅಂತರ್ ಕಾಲೇಜ್ ಸ್ಪರ್ಧೆ ‘ಅಂತರ್ ಕಾಲೇಜ್ ಸ್ಪರ್ಧೆ-2020’ನ್ನು ಯಶಸ್ವಿಯಾಗಿ ಆಯೋಜಿಸಿತು.

ಕಾರ್ಯಕ್ರಮವನ್ನು ತುಳು ಸಿನಿಮಾ ನಟ ಹಾಗೂ ನಿರ್ದೇಶಕ, ರೂಪೇಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನೋರ್ಬರ್ಟ್ ಲೋಬೋ, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಹಾಗೂ ಸಫಲತೆಯನ್ನು ಸವಿಯಲು ಸಾಧ್ಯ ಎಂದರು.

ಕಾಲೇಜಿನ ಸಂಚಾಲಕ ವಂ.ವಿನ್ಸೆಂಟ್ ಮೊಂತೇರೊ ಆಶೀರ್ವಚನ ನೀಡಿದರು.

ಪ್ರಾಂಶುಪಾಲ ವಂ.ಆಲ್ವಿನ್ ಸೆರಾವೊ ಸ್ವಾಗತಿಸಿ, ಶುಭ ಹಾರೈಸಿದರು.

ವೇದಿಕೆಯಲ್ಲಿ ಸ್ಪರ್ಧೆಯ ಸಂಚಾಲಕ ಮಿಶೆಲ್ ಡಯಾಸ್ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ರೋಶನ್ ಸಾಂತುಮಾಯರ್, ವಿಧ್ಯಾರ್ಥಿ ನಾಯಕನಾದ ಮೆಲ್ಸ್ಟನ್ ನೊರೊನ್ಹ, ಕಾರ್ಯದರ್ಶಿ ಅಕ್ಷಾ ಉಪಸ್ಥಿತರಿದ್ದರು.

ಇಡೀ ದಿನ‌ ನಡೆದ ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸುಮಾರು 23 ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರಿನ ಎಸ್.ಡಿ.ಎಂ. ಕಾಲೇಜು ಪ್ರಥಮ ಹಾಗೂ ಉಡುಪಿ ತ್ರಿಷಾ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News