ಜ.21: ಜಯಂತಿಗಳ ಆಚರಣೆ ಕುರಿತ ಅಭಿಪ್ರಾಯ ಸಂಗ್ರಹ ಸಭೆ

Update: 2020-01-18 15:16 GMT

ಉಡುಪಿ, ಜ.18: ಪ್ರತಿ ವರ್ಷ ಸರಕಾರದ ವತಿಯಿಂದ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ 25ಕ್ಕೂ ಹೆಚ್ಚು ಮಹಾತ್ಮರ/ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಈ ಕುರಿತು ಸಲಹೆ, ಅಭಿಪ್ರಾಯ ಸಂಗ್ರಹಿಸುವ ಸಭೆಯನ್ನು ಆಯೋಜಿಸಲಾಗಿದೆ.

ಪ್ರಸ್ತುತ ಆಚರಿಸಲಾಗುವ ಜಯಂತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ-ಚರ್ಚೆಗಳು ನಡೆಯುತ್ತಿದ್ದು, ಮಹನೀಯರ ಜಯಂತಿಗಳನ್ನು ಸರಕಾರ ದಿಂದ ಆಚರಿಸುವ ಅವಶ್ಯಕತೆ ಇದೆಯೇ, ಸರಕಾರದಿಂದ ಜಯಂತಿಗಳನ್ನು ಆಚರಿಸಬೇಕಾದಲ್ಲಿ ಆಚರಣೆಯ ಸ್ವರೂಪ ಹೇಗಿರಬೇಕು ಹಾಗೂ ಮಹನೀ ಯರ ಜಯಂತಿಗಳನ್ನು ಆಚರಿಸುವಲ್ಲಿ ಅನುಸರಿಸಬೇಕಾದ ರಚನಾತ್ಮಕ ಅಂಶ ಗಳೇನು ಎಂಬುದರ ಕುರಿತು ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗಿದೆ.

ಆದುದರಿಂದ ಈ ಬಗ್ಗೆ ಜಿಲ್ಲೆಯ ಸಮಾಜದ ಚಿಂತಕರು, ವಿಚಾರವಾದಿಗಳು, ಸಾಹಿತಿಗಳು, ಜನಪ್ರತಿನಿಧಿಗಳು ಮತ್ತು ಮಾಧ್ಯಮದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ಜ.21ರಂದು ಬೆಳಗ್ಗೆ 10:30ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು, ಜಯಂತಿಗಳ ಆಚರಣೆ ಕುರಿತು ಸಲಹೆ/ಅಭಿಪ್ರಾಯಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News