ರಾಜ್ಯಮಟ್ಟದ ದಫ್ ಸ್ಪರ್ಧೆ: ಮಜೂರು ಸಿರಾಜುಲ್ ಹುದಾ ತಂಡಕ್ಕೆ ಪ್ರಶಸ್ತಿ

Update: 2020-01-18 15:17 GMT

ಕಾಪು, ಜ.18: ಪೊಲಿಪು ಜಾಮೀಯ ಮಸೀದಿಯ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿರುವ ಪೊಲಿಪು ಖುವ್ವತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿ ಯೇಶನ್ ಇದರ 30ನೆ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಆಯ್ದ ತಂಡಗಳ ದಫ್ ಸ್ಪರ್ಧೆಯು ಶುಕ್ರವಾರ ನಡೆಯಿತು.

ಸ್ಫರ್ಧೆಯಲ್ಲಿ ಮಲ್ಲಾರು ಮಜೂರಿನ ಸಿರಾಜುಲ್ ಹುದಾ ದಫ್ಫ್ ಕಮಿಟಿ ಪ್ರಥಮ, ಕಟಪಾಡಿ ಮಣಿಪುರ ಕಲಂದರ್ ಶಾ ದಫ್ ಕಮಿಟಿ ದ್ವಿತೀಯ, ಬಿ.ಸಿ.ರೋಡ್ ಕೈಕಂಬ ರಿಫಾಯಿಯ್ಯ ದಫ್ಫ್ ಅಸೋಸಿಯೇಷನ್ ತೃತೀಯ ಬಹುಮಾನ ಗೆದ್ದುಕೊಂಡಿದೆ.

ಮಜೂರು ಸಿರಾಜುಲ್ ಹುದಾ ದಫ್ಫ್ ಕಮಿಟಿ ತಂಡದ ಹಾಡುಗಾರರಾದ ಝಮೀರ್ ಹಾಗೂ ಫಾರೂಕ್ ಮಜೂರ್ ಉತ್ತಮ ಹಾಡುಗಾರ ಪ್ರಶಸ್ತಿ ಯನ್ನು ಪಡೆದುಕೊಂಡರು. ವಿಜೇತ ತಂಡಗಳಿಗೆ ಪ್ರಥಮ 30313ರೂ., ದ್ವಿತೀಯ 20313ರೂ., ತೃತೀಯ 10313ರೂ. ನಗದು ಮತ್ತು ಟ್ರೋಫಿ ಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಸನಬ್ಬ, ಸಲಹೆಗಾರರಾದ ಹಮೀದ್ ಪಾಂಗಾಳ, ಹುಸೇನಾರ್, ಗೌರವಾಧ್ಯಕ್ಷ ಬಶೀರ್ ಜನಪ್ರಿಯ, ಅಧ್ಯಕ್ಷ ಅಕ್ರಂ ಗುಡ್‌ವಿಲ್, ಕಾರ್ಯದರ್ಶಿ ರಜಬ್, ಉಪಾಧ್ಯಕ್ಷ ಅಶ್ರಫ್ ಮೈತ್ರಿ, ಕೋಶಾಧಿಕಾರಿ ಅಝೀಝ್, ಜತೆ ಕಾರ್ಯದರ್ಶಿ ಶಾಹೀದ್ ಕಾಪು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News