ಫೆ.7-9: ಬೀದರ್ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪಶು ಮೇಳ

Update: 2020-01-18 15:21 GMT

ಮಂಗಳೂರು, ಜ.18: ಕರ್ನಾಟಕ ಸರಕಾರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಬೀದರ್ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪಶು ಮೇಳವು ಫೆ.7ರಿಂದ 9ರವರೆಗೆ ನಡೆಯಲಿದೆ.

ಇದರಲ್ಲಿ ಭಾಗವಹಿಸಲು ಆಸಕ್ತ ರೈತರು ಜ.27ರೊಳಗೆ ಹೆಸರು,ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು.ರೈತರಿಗೆ ಉಚಿತ ಬಸ್ಸ್ ವ್ಯವಸ್ಥೆ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮಾಹಿತಿಗಾಗಿ ದೂ.ಸಂ: ಬಂಟ್ವಾಳ- 08255-232512, ಬೆಳ್ತಂಗಡಿ- 08256-232067, ಮಂಗಳೂರು- 0824-2492369, ಪುತ್ತೂರು- 08251-230664, ಸುಳ್ಯ- 08257-230412ನ್ನು ಸಂಪರ್ಕಿಸಲು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News