ಗಂಗೊಳ್ಳಿ ಗ್ರಾಪಂ 13 ಮಂದಿ ಬಿಜೆಪಿ ಬೆಂಬಲಿತ ಸದಸ್ಯರ ರಾಜಿನಾಮೆ

Update: 2020-01-18 16:37 GMT

ಕುಂದಾಪುರ, ಜ.18: ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವಾ ಧಿಕಾರಿ ಧೋರಣೆ ತೋರಿಸುತ್ತಿರುವುದಾಗಿ ಆರೋಪಿಸಿ ಬಿಜೆಪಿ ಬೆಂಬಲಿತ 13 ಮಂದಿ ಗ್ರಾಪಂ ಸದಸ್ಯರು ಜ.16ರಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಗಂಗೊಳ್ಳಿ ಗ್ರಾಪಂ ಸದಸ್ಯರಾದ ನಾಗರಾಜ ಖಾರ್ವಿ ಗುಡ್ಡೆಕೇರಿ, ಮಂತಿ ಶ್ರೀನಿವಾಸ ಖಾರ್ವಿ, ಬೈರು ಬಸವ ಖಾರ್ವಿ ಮತ್ತು ನಾಗರಾಜ ಖಾರ್ವಿ ದಾಕುಹಿತ್ಲು, ಲಲಿತಾ ಖಾರ್ವಿ, ಸುಮಿತ್ರಾ ಶೇರುಗಾರ್, ಸಾವಿತ್ರಿ ಖಾರ್ವಿ, ರಾಜ್ಕಿರಣ್, ಪ್ರಶಾಂತ ಖಾರ್ವಿ, ಅರುಣ್ ಪೂಜಾರಿ, ಅಂಬಿಕಾ ಖಾರ್ವಿ, ರೇಖಾ ಖಾರ್ವಿ, ನಿರ್ಮಲಾ ಪೂಜಾರಿ ಅವರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

2019ರ ಜನವರಿ ತಿಂಗಳಿನಲ್ಲಿ ಗಂಗೊಳ್ಳಿ ಗ್ರಾಪಂಗೆ ಚುನಾವಣೆ ನಡೆದಿದ್ದು, ಒಟ್ಟು 33 ಸದಸ್ಯ ಬಲದ ಗಂಗೊಳ್ಳಿ ಗ್ರಾಪಂನಲ್ಲಿ 23 ಮಂದಿ ಬಿಜೆಪಿ ಬೆಂಬ ಲಿತರು, 6 ಮಂದಿ ಕಾಂಗ್ರೆಸ್ ಮತ್ತು ನಾಲ್ವರು  ಎಸ್‌ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News