ಬೆಂಗರೆ : ಜಸ್ಟೀಸ್ ಫಾರ್ ರೋಹಿತ್ ವೆಮುಲಾ ಪ್ರತಿಭಟನೆ

Update: 2020-01-18 16:46 GMT

ಮಂಗಳೂರು : ಎಸ್‌ಐಒ ಬೆಂಗರೆ ಘಟಕದ ವತಿಯಿಂದ ಕಸ್ಬಾ ಬೆಂಗರೆಯಲ್ಲಿ ‘ರೋಹಿತ್ ವೇಮುಲಾ’ ಶಹಾದತ್ ದಿವಸ್ ಹಿನ್ನೆಲೆಯಲ್ಲಿ ಮೊಂಬತ್ತಿ ಪ್ರತಿಭಟನೆಯು ನಡೆಯಿತು.

ಈ ಸಂದರ್ಭ ಮಾತನಾಡಿದ ಎಸ್‌ಐಒ ರಾಜ್ಯ ಸಲಹಾ ಸಮಿತಿಯ ಸದಸ್ಯ ತಲ್ಹಾ ಇಸ್ಮಾಯೀಲ್ ‘ಹೈದ್ರಾಬಾದ್ ವಿಶ್ವ ವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮೂಲರ ಸಾಂಸ್ಥಿಕ ಹತ್ಯೆಯು ಇತಿಹಾಸ ಪುಟ ಸೇರಿದೆ. ಆದರೆ ಈ ಪ್ರಕರಣದಿಂದ ದೇಶಾದ್ಯಂತ ವಿದ್ಯಾರ್ಥಿ ಸಮೂಹವು ಕೇಂದ್ರ ಸರಕಾರದ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ನಿರಂತರ ಧ್ವನಿಯೆತ್ತುತ್ತಿವೆ ಎಂದರು.

ಸರಕಾರವು ಅನಾವಶ್ಯವಾಗಿ ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿಗಳು ಕಳೆದ 40 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಬದಲಾಗಿ ಆ ವಿದ್ಯಾರ್ಥಿಗಳನ್ನು ದಮನಿಸಲು ನಾನಾ ರೀತಿಯಲ್ಲಿ ತಯಾರಿ ನಡೆಸುತ್ತಿದೆ ಎಂದು ತಲ್ಹಾ ಇಸ್ಮಾಯೀಲ್ ಆರೋಪಿಸಿದರು.

ಈ ಸಂದರ್ಭ ಬೆಂಗ್ರೆ ಅಧ್ಯಕ್ಷ ಅಝೀಝ್, ಸದಸ್ಯರಾದ ಸಿನಾಫ್, ರಾಝಿಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News