ಮಸೀದಿ ಮದ್ರಸಗಳಿಂದಾಗಿ ದೇಶದಲ್ಲಿ ಸೌಹಾರ್ದದ ವಾತಾವರಣ ಇದೆ: ಜಿಫ್ರಿ ತಂಙಳ್

Update: 2020-01-18 16:49 GMT

ಮಡಂತ್ಯಾರು, ಜ.18: ಧಾರ್ಮಿಕ ಅಧ್ಯಯನದಿಂದ ಮಾನವರಲ್ಲಿ ಪ್ರೀತಿ ಮತ್ತು ಭಾತೃತ್ವ ವೃದ್ದಿಯಾಗುತ್ತದೆ. ಇಡೀ ಜಗತ್ತಿನ ಸರ್ವ ಸೃಷ್ಟಿಯೂ ಮಾನವನ ಧರ್ಮಬದ್ಧ ಬದುಕಿನಿಂದ ಸಂತುಷ್ಟಗೊಳ್ಳುತ್ತದೆ.ಅನ್ಯಾಯ, ಅಕ್ರಮ, ಸುಳ್ಳು ವಂಚನೆ ದ್ವೇಷ ಅಸೂಯೆಗಳಿಗೆ ಕಡಿವಾಣ ಹಾಕುವುದೇ ಧರ್ಮದ ಗುರಿ. ಇದನ್ನೇ ಮದ್ರಸಗಳಲ್ಲಿ ಕಲಿಸಲಾಗುತ್ತದೆ ಎಂದು ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಸೈಯ್ಯಿದುಲ್ ಉಲಮಾ ಜಿಫ್ರಿ ತಂಙಳ್ ಅಭಿಪ್ರಾಯಪಟ್ಡಿದ್ದಾರೆ.

ಮಡಂತ್ಯಾರು ಸಮೀಪದ ಪಾಂಡವರಕಲ್ಲು ಕೊಮಿನಡ್ಕ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಶಂಸುಲ್ ಉಲಮಾ ಸ್ಮಾರಕ ಮದ್ರಸ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಭಾಷಣಗೈದ ದಾರಿಮಿ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ದೇಶದ ಸೌಹಾರ್ದತೆಯನ್ನು ಭದ್ರಗೊಳಿಸುವ ಸಲುವಾಗಿ ಸಮುದಾಯದ ಐಕ್ಯತೆಯನ್ನು ಪ್ರತಿಪಾದಿಸಿದ್ದ ಶಂಸುಲ್ ಉಲಮಾರ ತೀರ್ಮಾನ ಇಂದಿಗೂ ಪ್ರಸ್ತುತವಾಗಿದೆ. ಅವರ ನಾಮಧೇಯ ದಲ್ಲಿ ಹತ್ತು ಹಲವು ಧಾರ್ಮಿಕ ಸಂಸ್ಥೆಗಳು ಕಾರ್ಯಚರಿಸುತ್ತಿರು ವುದು ಅವರಿಗೆ ಸಂದ ಗೌರವವಾಗಿದೆ ಎಂದರು.

ಕೇಂದ್ರ ಮಸೀದಿಯ ಅಬೂಬಕರ್ ಕೆದಿಲೆ ಅದ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅನ್ವರ್ ಫೈಝಿ, ಕುಕ್ಕಿಲ ದಾರಿಮಿ ಮುಖ್ಯ ಭಾಷಣಗೈದರು. ಕೊಮಿನಡ್ಕ ಮದ್ರಸದ ಅದ್ಯಕ್ಷ ಅಬೂಬಕರ್ ಸಿದ್ದೀಕ್ ದರ್ಸಿ, ಪುತ್ತುಮೋನು ಕುದುರು, ಮಜೀದ್ ದಾರಿಮಿ ಘಟ್ಟಮನೆ, ಹಮೀದ್ ಮಾಸ್ಟರ್, ಅಬ್ದುಲ್ ಖಾದಿರ್ ಕೆದಿಲೆ, ಬಿ. ಅಬ್ದುಲ್ಲ, ಖಾದರ್ ಮಾಸ್ಟರ್ ಬಂಟ್ವಾಳ, ಉಮರ್ ಮುಸ್ಲಿಯಾರ್, ಸಿರಾಜ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.

ಸದರ್ ಮುಅಲ್ಲಿಂ ರಝಾಕ್ ದರ್ಸಿ ಸ್ವಾಗತಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News