ರೋಮ್ ರ್ಯಾಂಕಿಂಗ್ ಸಿರೀಸ್ ಕುಸ್ತಿ ಟೂರ್ನಮೆಂಟ್: ಗುರುಪ್ರೀತ್ ಸಿಂಗ್‌ಗೆ ಚಿನ್ನ

Update: 2020-01-18 17:09 GMT

ಹೊಸದಿಲ್ಲಿ, ಜ.18: ಕಳೆದ ವರ್ಷ ಇಟಲಿಯಲ್ಲಿ ರ್ಯಾಂಕಿಂಗ್ ಸಿರೀಸ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಗ್ರೀಕೊ-ರೋಮನ್ ಕುಸ್ತಿಪಟು ಎನಿಸಿಕೊಂಡಿದ್ದ ಮೊಹಾಲಿಯ ಗುರುಪ್ರೀತ್ ಸಿಂಗ್ ಶುಕ್ರವಾರ ರೋಮ್ ರ್ಯಾಂಕಿಂಗ್ ಸಿರೀಸ್ ಟೂರ್ನಿಯಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಪುನರಾವರ್ತಿಸಿದರು. 82 ಕೆ.ಜಿ. ಫೈನಲ್‌ನಲ್ಲಿ ಟಕಿರ್ಯ ಬುಹ್ರಾನ್ ಅಕ್ಬುದಕ್‌ರನ್ನು 8-5 ಅಂತರದಿಂದ ಮಣಿಸಿದ ಗುರುಪ್ರೀತ್ ಪ್ರಶಸ್ತಿ ಜಯಿಸಿದರು. ಜರ್ಮನಿಯ ಪ್ಲೋರಿಯನ್‌ರನ್ನು 7-0 ಅಂತರದಿಂದ ಮಣಿಸಿದ ಗುರುಪ್ರೀತ್ ಕ್ವಾರ್ಟರ್ ಫೈನಲ್ ತಲುಪಿದರು. ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಡಿಮಿಟ್ರೊ ಗಾರ್ಡುಬೀ ಅವರನ್ನು ಮಣಿಸಿದರು. ಸೆಮಿ ಫೈನಲ್‌ನಲ್ಲಿ ಅಮೆರಿಕದ ಜಾನ್ ವಾಲ್ಟರ್ ಸ್ಟೆಫಾನೊವಿಝ್‌ರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

ಗ್ರೀಕೊ-ರೋಮನ್ ವಿಭಾಗದಲ್ಲಿ ಸಾಜನ್ ಭನ್ವಾಲ್ 77 ಕೆ.ಜಿ. ತೂಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ಟೂರ್ನಮೆಂಟ್‌ನ ಗ್ರೀಕೊ-ರೋಮನ್ ವಿಭಾಗದಲ್ಲಿ ಭಾರತ ಜಯಿಸಿದ ಮೂರನೇ ಪದಕವಾಗಿದೆ. ಸುನೀಲ್ ಕುಮಾರ್ ಮೊದಲ ದಿನದ ಸ್ಪರ್ಧೆಯಲ್ಲಿ 87 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News