ಅಬುಧಾಬಿ ವಿಶ್ವದ ಅತ್ಯಂತ ಸುರಕ್ಷಿತ ನಗರ: ಮಂಗಳೂರು ಎಷ್ಟನೆ ಸ್ಥಾನದಲ್ಲಿದೆ ಗೊತ್ತಾ ?

Update: 2020-01-18 18:05 GMT

ಹೊಸದಿಲ್ಲಿ, ಜ.18: ಅಪರಾಧ ಸೂಚ್ಯಂಕದಲ್ಲಿ ಅತ್ಯಂತ ಕನಿಷ್ಟ ಪ್ರಮಾಣ ದಾಖಲಿಸಿರುವ ಅಬುಧಾಬಿ ವಿಶ್ವದ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವಾಗಿದ್ದು ಜಾಗತಿಕ ಪಟ್ಟಿಯಲ್ಲಿ 37ನೇ ಸ್ಥಾನ ಪಡೆದಿದೆ ಎಂದು ವರದಿ ತಿಳಿಸಿದೆ.

ಜಾಗತಿಕ ಮಾಹಿತಿ ಮೂಲವನ್ನು ಆಧರಿಸಿ ‘ನಂಬಿಯೊ’ ಎಂಬ ಸಂಸ್ಥೆ ಈ ವರದಿ ತಯಾರಿಸಿದೆ. ಗ್ರಾಹಕ ಬೆಲೆ, ಅಪರಾಧ ಪ್ರಮಾಣ, ಆರೋಗ್ಯ ರಕ್ಷಣೆಯ ಗುಣಮಟ್ಟ ಸಹಿತ ಇತರ ಹಲವು ಅಂಕಿಅಂಶದ ಆಧಾರದಲ್ಲಿ ಈ ಸೂಚ್ಯಾಂಕ ಸಿದ್ಧಪಡಿಸಲಾಗಿದೆ. 88.67 ಸುರಕ್ಷಾ ಸೂಚ್ಯಂಕದೊಂದಿಗೆ ಅಬುಧಾಬಿ ಅಗ್ರಸ್ಥಾನದಲ್ಲಿದೆ. ಶಾರ್ಜಾ 5ನೇ ಸ್ಥಾನದಲ್ಲಿ, ದುಬೈ 7ನೇ ಸ್ಥಾನದಲ್ಲಿದೆ.

ತೈಪೆ, ಕ್ವಿಬೆಕ್, ಝೂರಿಚ್, ಮ್ಯೂನಿಚ್, ಎಸ್ಕಿಸೆಹಿರ್ ಮತ್ತು ಬರ್ನ್ ನಗರಗಳು ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಪಖಂಡದಲ್ಲಿ ಮಂಗಳೂರು 37ನೇ ಸ್ಥಾನ, ಇಸ್ಲಮಾಬಾದ್ 74ನೇ ಸ್ಥಾನ ಪಡೆದಿದೆ.

374 ನಗರಗಳ ಪಟ್ಟಿಯಲ್ಲಿ ಅಬುಧಾಬಿ 11.33 ಅಪರಾಧ ಸೂಚ್ಯಂಕ ದಾಖಲಿಸಿದ್ದರೆ, 84.90 ಅಪರಾಧ ಸೂಚ್ಯಾಂಕದೊಂದಿಗೆ ವೆನೆಝುವೆಲದ ಕ್ಯಾರಕಸ್ ಅತ್ಯಂತ ಅಸುರಕ್ಷಿತ ನಗರ ಎನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News