ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ಭಾರತೀಯರಿಗೆ ಅಪಾಯ: ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ

Update: 2020-01-19 12:24 GMT

ಉಡುಪಿ, ಜ.19: ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ದೇಶದಲ್ಲಿ ಗೊಂದಲವನ್ನು ಸೃಷ್ಠಿಸಲಾಗುತ್ತಿದೆ. ಈ ಕಾಯ್ದೆ ಕ್ರೈಸ್ತರು ಮತ್ತು ಮುಸ್ಲಿಮರಿಗೆ ಮಾತ್ರವಲ್ಲ, ಇಡೀ ಭಾರತೀಯರಿಗೆ ತೊಂದರೆ ಉಂಟು ಮಾಡುತ್ತದೆ. ನಾನು ಭಾರತೀಯಳಾಗಿ ಜನಸಿದ್ದು, ಮತ್ತೊಮ್ಮೆ ಇದನ್ನು ಸಾಬೀತುಪಡಿಸಬೇಕಾಗಿಲ್ಲ. ಅದಕ್ಕಾಗಿ ಯಾವುದೇ ಅರ್ಜಿಯನ್ನು ಭರ್ತಿ ಮಾಡುವುದಿಲ್ಲ ಎಂದು ಉತ್ತರಾ ಖಂಡದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಲಾದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.

ಈ ತಿದ್ದುಪಡಿ ಕಾಯ್ದೆಯಂತೆ ನಮ್ಮ ಅಜ್ಜ ಮತ್ತು ಪೂರ್ವಜರ ಜನನ ಪ್ರಮಾಣ ಪ್ರತ್ರವನ್ನು ಕೇಳಲಾಗುತ್ತಿದೆ. ನಮ್ಮ ಪೌರತ್ವವನ್ನು ಸಾಬೀತು ಪಡಿಸಲು ಹೇಳುತ್ತಿರುವ ಪ್ರಧಾನಿಗೆ ತನ್ನ ಪದವಿ ಪ್ರಮಾಣಪತ್ರವನ್ನು ಇನ್ನೂ ಕೂಡ ಹುಡುಕಲು ಸಾಧ್ಯವಾಗಿಲ್ಲ. ಇಂತಹ ಅನಕ್ಷರಸ್ಥ ನಾಯಕರು, ಏನೂ ತಿಳಿಯದ ಬಡ ಜನರ ಪ್ರಮಾಣ ಪತ್ರಗಳನ್ನು ಕೇಳುವುದು ಸರಿಯಲ್ಲ ಎಂದರು.

ಎನ್‌ಸಿಆರ್, ಸಿಎಎ ಬಗ್ಗೆ ಪ್ರಚಾರ ಮಾಡಲು ಆರೆಸ್ಸೆಸ್ ಕಾರ್ಯಕರ್ತರು ಮನೆ ಮನೆಗೆ ಬರುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರ ಬೇಕು. ಉತ್ತರ ಭಾರತದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಅಲ್ಪ ಸಂಖ್ಯಾತರನ್ನು ಗುರಿಯಾಗಿರಿಸಿ ದಾಳಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇಂದು ಜನ ಭಯಭೀತರಾಗಿ ಮೌನರಾಗಿದ್ದಾರೆ. ಇದರ ಬಗ್ಗೆ ಮಾತನಾಡಿದರೆ ಐಟಿ, ಇಡಿ ದಾಳಿ, ಜೈಲಿಗೆ ಹಾಕುತ್ತಾರೆ ಎಂಬ ಭಯ ಕಾಡುತ್ತಿದೆ. ಇಂದು ನಾವು ಇದರ ವಿರುದ್ಧ ಮಾತನಾಡದೆ ಮೌನವಾಗಿದ್ದರೆ ಮುಂದೆ ಪರಿ ಣಾಮ ಎದುರಿಸಬೇಕಾಗುತ್ತದೆ. ಆದುದರಿಂದ ಇದರ ವಿರುದ್ಧ ಧ್ವನಿ ಎತ್ತಿ, ಧೈರ್ಯದಿಂದ ಹೋರಾಟ ಮಾಡಬೇಕು. ಈ ಹೋರಾಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು ಮತ್ತು ಹಿಂದೆ ಸರಿಯಬಾರದು. ಇದು ಪ್ರತಿ ಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಸಮುದಾಯೋತ್ಸವವನ್ನು ಉದ್ಘಾಟಿಸಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಕಳೆದ 25 ವರ್ಷಗಳಿಗೆ ಹೋಲಿಸಿದರೆ ನಮ್ಮ ಧರ್ಮಪ್ರಾಂತ್ಯದಲ್ಲಿ ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯೆಯಲ್ಲಿ ನಾವು ಉಡುಪಿ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ನಾವು ನಮ್ಮ ಹಿಂಜರಿ ಯುವ ಗುಣಗಳಿಂದಾಗಿ ನಮ್ಮ ಶಕ್ತಿಯನ್ನು ಅಥವಾ ನಮ್ಮ ಹಕ್ಕುಗಳನ್ನು ಳೆದು ಕೊಳ್ಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಡ್ವರ್ಡ್ ಲಾರ್ಸನ್ ಡಿಸೋಜರ ‘ನಮ್ಮ ಸಂವಿಧಾನ ಮತ್ತು ಹಕ್ಕುಗಳು’ ಕೊಂಕಣಿ ಪುಸ್ತಕ ಹಾಗೂ ಡಾ.ಜೆರಾಲ್ಡ್ ಪಿಂಟೊ ರಚಿತ ಕೆಥೊಲಿಕ್ ಸಭಾ ಚರಿತ್ರೆಯ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ವಿಚಾರದ ಕುರಿತು ಮಾಜಿ ಶಾಸಕ ಜೆ.ಆರ್.ಲೋಬೊ ಪ್ರಧಾನ ಭಾಷಣ ಮಾಡಿದರು.

ನಿವೃತ್ತ ಕೆಎಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ನ್ಯಾಯವಾದಿ ವಂ. ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ, ಹಿರಿಯ ಪತ್ರಕರ್ತ ಗ್ಯಾಬ್ರಿಯಲ್ ವಾಸ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಮುಂಬೈ ಮಾಡೆಲ್ ಬ್ಯಾಂಕಿನ ಆಲ್ಬರ್ಟ್ ಡಿಸೋಜ, ಎಐಸಿಯು ಕಾರ್ಯದರ್ಶಿ ಜೆನೆಟ್ ಡಿಸೋಜ, ಎಐಸಿಯು ಅಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ರೋಲ್ಫಿ ಡಿಕೊಸ್ತಾ, ಜಾನ್ ಡಿಸಿಲ್ವಾ, ವಂ.ಡಾ. ಲೆಸ್ಲಿ ಕ್ಲಿಫಡರ್ ಡಿಸೋಜ, ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ಡೆಸಾ, ಎಲಿಯಾಸ್ ಡಿಸೋಜ ಸಂತೆಕಟ್ಟೆ, ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ವಲೆರೀಯನ್ ಫೆರ್ನಾಂಡಿಸ್, ಸಮುದಾಯೋತ್ಸವ ಸಂಚಾಲಕ ಎಲ್ರೋಯ್ ಕಿರಣ್ ಕ್ರಾಸ್ಟೊ, ವಲಯಗಳ ಅಧ್ಯಕ್ಷರಾದ ರೊನಾಲ್ಡ್, ಹೆರಿಕ್, ಐಡಾ ಕರ್ನೆಲಿಯೊ, ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ಸಮುದಾಯೋತ್ಸವ ಕಾರ್ಯದರ್ಶಿ ಮೇರಿ ಡಿಸೋಜ ವಂದಿಸಿದರು. ಲೆಸ್ಲಿ ಆರೋಜಾ ಹಾಗೂ ಎಡ್ವರ್ಡ್ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಭುತ್ವದ ಬೇರುಗಳು ದುರ್ಬಲ: ಬಿಷಪ್

ಹಲವಾರು ಕಾರಣಗಳಿಗೆ ಪ್ರಜಾಪ್ರಭುತ್ವದ ಬೇರುಗಳು ಇಂದು ದುರ್ಬಲ ಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗೂಡುವ ಅಗತ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ದೇಶದಲ್ಲಿ ವಸ್ತುಗಳ ಬೆಲೆ ಏರುತ್ತಿದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನಾವು ಭಾರತೀಯ ಮೂಲದವರು ಎಂದು ಸಾಬೀತುಪಡಿಸುವಲ್ಲಿ ವಿಫಲ ರಾಗಿದ್ದೇವೆ. ನಾವು ಇನ್ನೂ ಎಲ್ಲದಕ್ಕೂ ಚರ್ಚ್‌ಗಳನ್ನೇ ಅವಲಂಬಿಸುತ್ತಿದ್ದು ನಾವಾಗಿ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಶಕ್ತರಾಗಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟಿತರಾಗಬೆೀಕಾಗಿದೆ ಎಂದು ಅವರು ತಿಳಿಸಿದರು.

ಕನಕಪುರದಲ್ಲಿ 800 ಕ್ರೈಸ್ತರ ಕುಟುಂಬಗಳಿದ್ದರೂ ಅಲ್ಲಿ ಕ್ರಿಸ್ತ ಪ್ರತಿಮೆ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಈ ದೇಶದಲ್ಲಿ ಬೇರೆಯವರ ಪ್ರತಿಮೆಯನ್ನು ಎಲ್ಲಿ ಬೇಕಾದರೂ ಎಷ್ಟು ದೊಡ್ಡದು ಬೇಕಾದರೂ ನಿರ್ಮಿಸಬಹುದು. ಆದರೆ ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮಾತ್ರ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಮಾರ್ಗರೇಟ್ ಆಳ್ವಾ ಪ್ರಶ್ನಿಸಿದರು.

 ಭಾರತ ಜಾತ್ಯತೀತೆಯಲ್ಲಿ ನಂಬಿಕೆ ಇರಿಸಿಕೊಂಡಿರುವ ದೇಶವಾಗಿದೆ. ಇಲ್ಲಿ ಎಲ್ಲ ಧರ್ಮಗಳಿಗೂ ಸ್ಥಾನಮಾನವನ್ನು ನೀಡಬೇಕಾಗಿದೆ. ಸಂವಿಧಾನ ನಮಗೆ ಅಧಿಕಾರ ಮತ್ತು ಹಕ್ಕುಗಳನ್ನು ನೀಡಿದೆ. ಆದರೂ ರಾಜಕೀಯ ಕಾರಣಕ್ಕಾಗಿ ಕ್ರಿಸ್ತ ಪ್ರತಿಮೆ ನಿರ್ಮಿಸಲು ವಿರೋಧ ಮಾಡುತ್ತಿರುವುದು ಖೇಧಕರ. ದೇಶದಲ್ಲಿ ಪ್ರಸ್ತುತ ನೇರವಾಗಿ ಅಲ್ಲವಾದರೂ ಕ್ರೈಸ್ತ ಸಮುದಾಯವನ್ನು ವಿವಿಧ ರೀತಿಯಲ್ಲಿ ಬೆದರಿಸು ವ್ಯವಸ್ಥೆ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News