ಉಡುಪಿ ಜಿಲ್ಲಾಮಟ್ಟದ ಪೊಲಿಯೋ ಲಸಿಕಾ ಕಾರ್ಯಕ್ರಮ ಉದ್ಘಾಟನೆ

Update: 2020-01-19 12:17 GMT

ಉಡುಪಿ ಜ.19: ಪೋಲಿಯೋ ಲಸಿಕೆ ಸೇರಿದಂತೆ ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಕಡ್ಡಾಯ ಲಸಿಕೆಗಳ ಬಗ್ಗೆ ಎಲ್ಲ ಹೆತ್ತವರು ಅರಿತಿರಬೇಕು. ಸರಿಯಾದ ಸಮಯಕ್ಕೆ ಅಗತ್ಯ ಮಕ್ಕಳಿಗೆ ಲಸಿಕೆಗಳನ್ನು ಕೊಡಿಸುವುದರ ಮೂಲಕ ಮಕ್ಕಳ ಆರೋಗ್ಯ ವನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಹೇಳಿದ್ದಾರೆ.

ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ, ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ರವಿವಾರ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ಪೊಲಿಯೋ ಪ್ರಕರಣ ಪತ್ತೆಯಾಗದಿದ್ದರೂ, ನೆರೆಯ ರಾಷ್ಟ್ರ ಗಳಲ್ಲಿ ಪೊಲಿಯೋ ಇದ್ದು, ಅಲ್ಲಿಂದ ವಲಸೆ ಬರುವವರ ಮೂಲಕ ರೋಗಾಣು ಗಳು ದೇಶದಲ್ಲಿ ಹರಡುವ ಸಾಧ್ಯತೆಯಿರುವುದರಿಂದ ಎಲ್ಲಾ ಪೋಷಕರು ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಬೇಕು. ಆರೋಗ್ಯ ವಂತ ಮಕ್ಕಳಿಂದ ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಣವಾಗಲು ಸಾಧ್ಯ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ಮಾತನಾಡಿ, ಜಿಲ್ಲೆಯಲ್ಲಿ 0-5 ವರ್ಷ ದೊಳಗಿನ 74846 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ 658 ಲಸಿಕಾ ಕೇಂದ್ರಗಳನ್ನು ತೆರೆಯ ಲಾಗಿದೆ. 2764 ಸ್ವಯಂ ಸೇವಕರು ಹಾಗೂ 133 ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶಿಖಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ರೋಟರಿ ಕ್ಲಬ್‌ನ ಐ.ಕೆ.ಜಯಚಂದ್ರ ಮೊದಲಾದವರು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಜನಾದರ್ನ ಭಟ್ ಸ್ವಾಗತಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ ಕಾರ್ಯ ಕ್ರಮ ನಿರೂಪಿಸಿದರು.

ಶಿರ್ವ, ಪಡುಬೆಳ್ಳೆಯಲ್ಲಿ ಪೊಲಿಯೋ ಲಸಿಕೆ

ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿರ್ವ ರೋಟರಿ ಸಹಭಾಗಿತ್ವ ದಲ್ಲಿ ರವಿವಾರ ಜರಗಿದ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಶಿರ್ವ ರೋಟರಿ ಅಧ್ಯಕ್ಷ ಸುನಿಲ್ ಕಬ್ರಾಲ್ ಮಗುವಿಗೆ ಪೋಲಿಯೊ ಹನಿ ನೀಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿ ಕಾರಿ ಡಾ.ಸಂತೋಷ್‌ಕುಮಾರ್ ಬೈಲೂರು, ಶಿರ್ವ ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ, ಡಾ.ಅರುಣ್ ಹೆಗ್ಡೆ, ಕೋಡು ಸದಾನಂದ ಶೆಟ್ಟಿ, ಪೌಲ್ ಅರಾನ್ಹಾ, ರಘುಪತಿ ಐತಾಳ್, ಪಾರೂಕ್ ಚಂದ್ರನಗರ, ಜಿನೇಶ್ ಬಲ್ಲಾಳ್, ಹೆರಾಲ್ಡ್ ಕುಟಿನೊ, ಹಿರಿಯ ಅರೋಗ್ಯ ಕಾರ್ಯಕರ್ತೆ ಸರಳಾ, ಸಿಸಿಲಿಯಾ, ಕಲ್ಪನಾ, ದಿವಾಕರ ಶೆಟ್ಟಿ ಕಳತ್ತೂರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪಡುಬೆಳ್ಳೆ: ಪಡುಬೆಳ್ಳೆ ಆರೋಗ್ಯ ಉಪಕೇಂದ್ರದಲ್ಲಿ ಶಿರ್ವ ರೋಟರಿ ಸಹ ಭಾಗಿತ್ವದಲ್ಲಿ ರವಿವಾರ ಜರಗಿದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಹರೀಶ್ ಶೆಟ್ಟಿ ಮಗುವಿಗೆ ಪೋಲಿಯೊ ಹನಿ ನೀುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾನಸ ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಆರ್. ಪೂಜಾರಿ, ವಿನೋದಾ, ಶಕುಂತಳ ಆಚಾರ್ಯ, ದಿವ್ಯಾ ದಿನೇಶ್ ಪ್ರಭು, ವಿಶ್ವನಾಥ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News