ತೆಂಕು-ಬಡಗುತಿಟ್ಟಿನ ಹವ್ಯಾಸಿ ಕಲಾವಿದರಿಗಾಗಿ ಯಕ್ಷಗಾನ ಸ್ಪರ್ಧೆ

Update: 2020-01-19 12:35 GMT

ಮಂಗಳೂರು, ಜ.19: ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ), ಮಂಗಳೂರು ಇದರ ಪಂಚಮ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ 2020 ಕಾರ್ಯಕ್ರಮವು ಮೇ 30ರಂದು ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ. ಆ ಪ್ರಯುಕ್ತ ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಹವ್ಯಾಸಿ ಕಲಾವಿದರಿಗಾಗಿ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಯ ಪೂರ್ವಭಾವಿಯಾಗಿ ಉತ್ತಮ ತಂಡಗಳನ್ನು ಆಯ್ದುಕೊಳ್ಳುವುದಕ್ಕಾಗಿ ಪರೀಕ್ಷಾವಲೋಕನ (ಆಡಿಷನ್) ಸುತ್ತಿನ ಸ್ಪರ್ಧೆ ಮಾರ್ಚ್ ಮೂರನೇ ವಾರದಲ್ಲಿ ನಡೆಯಲಿದೆ.

ಒಂದು ತಂಡದಲ್ಲಿ 8ರಿಂದ 12 ಮುಮ್ಮೇಳ ಹವ್ಯಾಸಿ ಕಲಾವಿದರು ಹಾಗೂ 4 ಹಿಮ್ಮೇಳ ಹವ್ಯಾಸಿ/ವೃತ್ತಿಪರ ಕಲಾವಿದರು ಭಾಗವಹಿಸಬಹುದು. ಒಂದು ತಂಡಕ್ಕೆ ಪರೀಕ್ಷಾವಲೋಕನ ಸುತ್ತಿನಲ್ಲಿ ಗರಿಷ್ಠ 20 ನಿಮಿಷಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಫೆ.15ರೊಳಗೆ ತಮ್ಮ ತಂಡದ ಹಿಮ್ಮೇಳ, ಮುಮ್ಮೇಳ ಕಲಾವಿದರ ಪಟ್ಟಿಯನ್ನು ಭಾವಚಿತ್ರ ಸಹಿತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಫ್ಲಾಟ್ ನಂ. 202 ಕಮಲಾದೀಪ್ ಆಕರ್ಷತ್ ರೆಸಿಡೆನ್ಸಿ, 2ನೇ ಮಹಡಿ, ಅಡುಮರೋಳಿ, ಮಾರಿಕಾಂಬಾ ಟೆಂಪಲ್ ಹತ್ತಿರ, ನಂತೂರು ಮಂಗಳೂರು-575005 ಅಥವಾ ಸಿಎ ಸುದೇಶ್ ಕುಮಾರ್ ರೈ, ಕೋಶಾಧಿಕಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ), 2ನೇ ಮಹಡಿ, ಎಂಪೈರ್ ಮಹಲ್ ಎಂಜಿ ರೋಡ್, ಮಂಗಳೂರು-575003 ಈ ವಿಳಾಸಕ್ಕೆ ಸಲ್ಲಿಸಬಹುದು. ಮಾಹಿತಿಗೆ ಸ್ಫರ್ಧಾ ನಿಯಮಗಳು ಮತ್ತಿತರ ವಿವರಗಳಿಗಾಗಿ ಮೊ.ಸಂ: 9900371441/9448627215/9845172865 ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News