ಮಂಗಳೂರು: ಮೆಡಿಕಲ್‌ನೊಳಗೆ ಯುವಕನಿಗೆ ಹಲ್ಲೆ

Update: 2020-01-19 14:53 GMT

ಮಂಗಳೂರು, ಜ.19: ನಗರದ ಮೆಡಿಕಲ್‌ವೊಂದರಲ್ಲಿ ಎರಡು ದಿನದ ಹಿಂದೆ ಯುವಕನಿಗೆ ತಂಡವೊಂದು ಹಲ್ಲೆಗೈಯ್ಯುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜ.17ರ ರಾತ್ರಿ 12:15ರ ವೇಳೆಗೆ ಕಂಕನಾಡಿಯ ಮೆಡಿಕಲ್‌ವೊಂದಕ್ಕೆ ಔಷಧ ಖರೀದಿಗೆ ಬಂದ ವಾಲಿದ್ ಖಾನ್ ಎಂಬವರಿಗೆ ಕಿಶೋರ್ ಮತ್ತಿತರರನ್ನು ಒಳಗೊಂಡ ತಂಡ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ವಾಲಿದ್ ಖಾನ್ ಔಷಧ ಖರೀದಿಸಿ ಹೊರಡುವಾಗ ಆತನ ಕೈಯು ಅದೇ ಮೆಡಿಕಲ್‌ಗೆ ಬಂದಿದ್ದ ಗ್ರಾಹಕನೋರ್ವನಿಗೆ ತಾಗಿತು ಎನ್ನಲಾಗಿದೆ. ಈ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಅವರು ವಾಲಿದ್ ಖಾನ್‌ಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ನಡೆಸುತ್ತಿರುವ ದೃಶ್ಯ ಮೆಡಿಕಲ್‌ನ ಸಿಸಿ ಟಿವಿ ಫೂಟೇಜ್‌ನಲ್ಲಿ ದಾಖಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಚರ್ಚೆಯೂ ಆಗುತ್ತಿದೆ. ಹಲ್ಲೆಗೊಳಗಾದ ವಾಲಿದ್ ಖಾನ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News