ಸಂಸತ್ತು ಕೆಟ್ಟ ಕಾನೂನು ರೂಪಿಸಿದರೆ, ನ್ಯಾಯಮೂರ್ತಿಗಳು ಶಾಸಕಾಂಗದ ಕೆಲಸ ಮಾಡುತ್ತಾರೆ: ಹಾಮಿದ್ ಅನ್ಸಾರಿ

Update: 2020-01-19 17:46 GMT

ಹೊಸದಿಲ್ಲಿ, ಜ. 19: ಸಂಸತ್ತು ಕೆಟ್ಟ ಕಾನೂನು ರೂಪಿಸಿದರೆ ನ್ಯಾಯಮೂರ್ತಿಗಳು ಶಾಸಕಾಂಗದ ಕೆಲಸ ಮಾಡುತ್ತಾರೆ. ಇದರಿಂದ ಆ ಕಾನೂನು ಅಂತ್ಯಗೊಳ್ಳುತ್ತದೆ ಎಂದು ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಹೇಳಿದ್ದಾರೆ.

ಇಲ್ಲಿ ನಡೆದ ‘ಸಂಸದ್ 2020’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ನಾವು ಕೆಟ್ಟ ಕಾನೂನು ರೂಪಿಸಿದರೆ, ಕೂಡಲೇ ಅಥವಾ ಅನಂತರ ಕೆಲವು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅದನ್ನು ಅಂತ್ಯಗೊಳಿಸುತ್ತದೆ. ಸಂಸತ್ತು ಏನು ಮಾಡಬೇಕಿತ್ತೋ ಅದನ್ನು ನ್ಯಾಯಾಲಯಗಳು ಮಾಡುತ್ತವೆ’’ ಎಂದರು.

ಯಾವುದೇ ಕಾನೂನು ಅಥವಾ ನಿಯಮ ರೂಪಿಸುವಾಗ ಚರ್ಚೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ಇಂದು ಸಂಸತ್ತು, ವಿಧಾನ ಸಭೆ ಅಧಿವೇಶನಗಳು ಆಚರಣೆಯಾಗಿ ಮಾರ್ಪಟ್ಟಿವೆ. ಅಲ್ಲಿ ನೀವು ಭೇಟಿಯಾಗುತ್ತೀರಿ. ಕೆಲವು ವಿಷಯಗಳನ್ನು ಹೇಳುತ್ತೀರಿ. ಕೆಲವು ದಿನಗಳು ಒಟ್ಟಾಗಿ ಇರುತ್ತೀರಿ. ಅನಂತರ ಹೋಗುತ್ತೀರಿ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಜನರ ಒಪ್ಪಿಗೆ, ಜನರ ಅಭಿಪ್ರಾಯ ಅಗತ್ಯ ಎಂದು ಹಾಮಿದ್ ಅನ್ಸಾರಿ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News