ಹವಾಯಿ: ಗುಂಡು ಹಾರಾಟದಲ್ಲಿ ಇಬ್ಬರು ಪೊಲೀಸರ ಸಾವು

Update: 2020-01-20 16:24 GMT
ಸಾಂದರ್ಭಿಕ ಚಿತ್ರ

ಹೊನೊಲುಲು (ಹವಾಯಿ, ಅಮೆರಿಕ), ಜ. 20: ಅಮೆರಿಕದ ಹವಾಯಿ ರಾಜ್ಯದ ಇಬ್ಬರು ಪೊಲೀಸರನ್ನು ವ್ಯಕ್ತಿಯೊಬ್ಬ ರವಿವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಹಾಗೂ ಬಳಿಕ ಶಂಕಿತನು ತನ್ನ ಮನೆಗೆ ಬೆಂಕಿ ಕೊಟ್ಟಿದ್ದು ಬೆಂಕಿಯಲ್ಲಿ ಸುಟ್ಟು ಸತ್ತಿದ್ದಾನೆ ಎಂದು ಪೊಲೀಸರು ಭಾವಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಓಹು ಎಂಬಲ್ಲಿನ ವೈಕಿಕಿ ಬೀಚ್ ಸಮೀಪ ಈ ಘಟನೆ ನಡೆದಿದೆ.

‘‘ರವಿವಾರ ಬೆಳಗ್ಗೆ ನಡೆದ ಘಟನೆಯಲ್ಲಿ ನಮ್ಮ ಇಬ್ಬರು ಕರ್ತವ್ಯದಲ್ಲಿದ್ದ ಪೊಲೀಸರು ಮೃತಪಟ್ಟಿದ್ದು, ಅವರಿಗಾಗಿ ಇಡೀ ಹವಾಯಿ ರಾಜ್ಯ ಶೋಕಿಸುತ್ತಿದೆ’’ ಎಂದು ಹವಾಯಿ ಗವರ್ನರ್ ಡೇವಿಡ್ ಇಗ್ ಹೇಳಿಕೆಯೊಂದರಲ್ಲಿ ತಿಳಿಸಿದರು. ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಆರೋಪಿಯನ್ನು 69 ವರ್ಷದ ಜೆರಿ ಹ್ಯಾನಲ್ ಎಂದು ಗುರುತಿಸಲಾಗಿದೆ. ಬಾಡಿಗೆ ಮನೆಯಲ್ಲಿದ್ದ ಆತನನ್ನು ಮನೆ ಮಾಲಕಿಯು ಹೊರಹಾಕಲು ಯತ್ನಿಸುತ್ತಿದ್ದಾಗ ಅವನು ಮಾಲಕಿಗೆ ಚೂರಿಯಿಂದ ಇರಿದನು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅವರ ಮೇಲೆ ಗುಂಡು ಹಾರಿಸಿದನು ಎಂದು ‘ಹವಾಯಿ ನ್ಯೂಸ್ ನೌ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News