ಚೀನಾ: ‘ಸಾರ್ಸ್’ನಂಥ ನಿಗೂಢ ಕಾಯಿಲೆಗೆ 3ನೇ ಬಲಿ

Update: 2020-01-20 16:19 GMT

ಬೀಜೀಂಗ್, ಜ. 20: ಚೀನಾದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ‘ಸಾರ್ಸ್’ನಂಥ ವೈರಸ್‌ನ ಸೋಂಕಿನಿಂದಾಗಿ ಮೂರನೇ ಸಾವು ಸಂಭವಿಸಿದೆ ಹಾಗೂ ಸುಮಾರು 140 ಸೋಂಕು ಪ್ರಕರಣಗಳು ವರದಿಯಾಗಿವೆ.

2002-03ರಲ್ಲಿ ಚೀನಾ ಮತ್ತು ಹಾಂಕಾಂಗ್‌ನಲ್ಲಿ ಸುಮಾರು 650 ಜನರ ಸಾವಿಗೆ ಕಾರಣವಾದ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್)ನೊಂದಿಗೆ ನಂಟು ಹೊಂದಿರುವ ನೂತನ ಮಾದರಿಯ ಕೊರೋನವೈರಸ್ ಭಾರೀ ಕಳವಳಕ್ಕೆ ಕಾರಣವಾಗಿದೆ.

ಕೊರೋನವೈರಸ್ ಮೊದಲು ಪತ್ತೆಯಾದ ಚೀನಾದ ಮಧ್ಯ ಭಾಗದ ನಗರ ವುಹಾನ್‌ನಲ್ಲಿ ವಾರಾಂತ್ಯದಲ್ಲಿ 136 ನೂತನ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಸ್ಥಳೀಯ ಆರೋಗ್ಯ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News