ಆಶ್ರಯಧಾಮದಲ್ಲಿ ಬಾಲಕಿಯರ ಅತ್ಯಾಚಾರ ಪ್ರಕರಣ; 19 ಮಂದಿ ಮೇಲಿನ ಆರೋಪ ಸಾಬೀತು

Update: 2020-01-20 17:08 GMT

ಹೊಸದಿಲ್ಲಿ, ಜ. 20: ಬಿಹಾರದ ಮುಝಪ್ಫರ್‌ಪುರ ಜಿಲ್ಲೆಯ ಆಶ್ರಯಧಾಮದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಆರೋಪಿ ಬ್ರಿಜೇಶ್ ಠಾಕೂರ್ (ಆಶ್ರಯಧಾಮ ನಡೆಸುತ್ತಿದ್ದ ಮಾಜಿ ಶಾಸಕ) ಸೇರಿದಂತೆ 19 ಮಂದಿ ಮೇಲಿನ ಆರೋಪ ಸಾಬೀತಾಗಿದೆ.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ದಿಲ್ಲಿ ನ್ಯಾಯಾಲಯ 19 ಮಂದಿ ಆರೋಪಿಗಳು ಎಂದು ಪರಿಗಣಿಸಿ ತೀರ್ಪು ನೀಡಿದೆ. 19 ಮಂದಿ ಆರೋಪಿಗಳಲ್ಲಿ 8 ಮಂದಿ ಮಹಿಳೆಯರು ಹಾಗೂ ಬಿಹಾರ್ ಪೀಪಲ್ಸ್ ಪಕ್ಷದ ಮಾಜಿ ಶಾಸಕ ಸೇರಿದಂತೆ 12 ಮಂದಿ ಪುರುಷರು.

ಎಲ್ಲ 19 ಮಂದಿ ಆರೋಪಿಗಳಿಗೆ ಜನವರಿ 28ರ ಬೆಳಗ್ಗೆ 10 ಗಂಟೆಗೆ ಶಿಕ್ಷೆ ಘೋಷಿಸಲಾಗುವುದು. ಇವರ ಅಪರಾಧಕ್ಕೆ ಗರಿಷ್ಠ ಶಿಕ್ಷೆ ಜೀವಾವಧಿ ದೊರಕುವ ಸಾಧ್ಯತೆ ಇದೆ. ಮುಝಪ್ಫರ್‌ಪುರದ ಸರಕಾರಿ ಆಶ್ರಯಧಾಮದಲ್ಲಿ ಬಾಲಕಿಯರ ಜೊತೆ ಮಾತುಕತೆ ನಡೆಸಿದ್ದ ಮುಂಬೈ ಮೂಲದ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್‌ಸ್ 2018 ಮೇಯಲ್ಲಿ ವರದಿಯೊಂದನ್ನು ಸಲ್ಲಿಸಿತ್ತು. ಆ ವರದಿಯಲ್ಲಿ ಆಶ್ರಯಧಾಮದಲ್ಲಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತಿದೆ ಎಂದು ಆರೋಪಿಸಲಾಗಿತ್ತು. ಅನಂತರ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು.

ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವಂತೆ ಬಾಲಕಿಯರಿಗೆ ಬಲವಂತ ಮಾಡಲಾಗಿತ್ತು, ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಲಾಗಿತ್ತು ಎಂಬುದು ಅನಂತರ ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿರುವುದು ಬಹಿರಂಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News