ನವೊಮಿ ಒಸಾಕಾ ಶುಭಾರಂಭ

Update: 2020-01-20 18:00 GMT

ಮೆಲ್ಬೋರ್ನ್, ಜ.20: ಮೇರಿ ಬೌಝ್‌ಕೋವಾರನ್ನು ನೇರ ಸೆಟ್‌ಗಳಿಂದ ಮಣಿಸಿದ ಜಪಾನ್‌ನ ನವೊಮಿ ಒಸಾಕಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ರಾಡ್ ಲಾವೆರ್ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಒಸಾಕಾ ಅವರು ಝೆಕ್‌ನ ಬೌಝಕೋವಾರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಜೋಡಿ ಮೊದಲ ಬಾರಿ ಮುಖಾಮುಖಿಯಾಯಿತು. 22ರ ಹರೆಯದ ಒಸಾಕಾ ಮೆಲ್ಬೋರ್ನ್‌ನಲ್ಲಿ ಈ ತನಕ ಮೊದಲ ಸುತ್ತಿನ ಪಂದ್ಯವನ್ನು ಸೋತಿಲ್ಲ. ಮೂರನೇ ಶ್ರೇಯಾಂಕದ ಒಸಾಕಾ ಮುಂದಿನ ಸುತ್ತಿನಲ್ಲಿ ಚೀನಾದ ಝೆಂಗ್ ಸೈ ಅವರನ್ನು ಎದುರಿಸಲಿದ್ದಾರೆ. ಎರಡು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಒಸಾಕಾ ಆರಂಭದಲ್ಲಿ ಅಗ್ನಿಪರೀಕ್ಷೆ ಎದುರಿಸಿದರು. ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿರುವ ಒಸಾಕಾ ಮೊದಲ ಸೆಟನ್ನು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News