ಇಂಗ್ಲೆಂಡ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

Update: 2020-01-21 11:37 GMT

ಲಂಡನ್ , ಜ.21:  ಇಂಗ್ಲೆಂಡ್‌ನ ಮಿಡ್‌ಲ್ಯಾಂಡ್ಸ್ ಪ್ರದೇಶದ ನಾಟಿಂಗ್ ಹ್ಯಾಮ್ ನ  ಪಬ್ ಬಳಿ  ನಡೆದ ಹಲ್ಲೆ   ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು   ಸಾವನ್ನಪ್ಪಿದ್ದಾರೆ.

ನಾಟಿಂಗ್ ಹ್ಯಾಮ್ ನ  ಟ್ರೆಂಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರ್ಜುನ್ ಸಿಂಗ್  ಮೇಲೆ ಶನಿವಾರ ಸಂಜೆ ಹಲ್ಲೆ ನಡೆದಿತ್ತು.  ಗಂಭೀರ ಗಾಯಗೊಂಡಿದ್ದ ಅರ್ಜುನ್ ಸಿಂಗ್  ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  20 ವರ್ಷದ ಅರ್ಜುನ್ ಸಿಂಗ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ  20 ವರ್ಷದ ಯುವಕನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News