ನೇಪಾಳ: ಉಸಿರುಗಟ್ಟಿ ಕೇರಳದ ಎಂಟು ಪ್ರವಾಸಿಗರು ಮೃತ್ಯು

Update: 2020-01-21 14:25 GMT
ಸಾಂದರ್ಭಿಕ ಚಿತ್ರ

ಕಾಠ್ಮಂಡು,ಜ.21: ನೇಪಾಳಕ್ಕೆ ರಜಾದಿನಗಳ ಪ್ರವಾಸವನ್ನು ಕೈಗೊಂಡಿದ್ದ ಕೇರಳದ ಎಂಟು ಪ್ರವಾಸಿಗಳು ಮಕವಾನಪುರ ಜಿಲ್ಲೆಯ ದಮಾನ್ ಎಂಬಲ್ಲಿ ತಾವು ತಂಗಿದ್ದ ರೆಸಾರ್ಟ್ ‌ನಲ್ಲಿ ಮೃತಪಟ್ಟಿರುವುದು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಎವರೆಸ್ಟ್ ಪನೋರಮಾ ರೆಸಾರ್ಟ್‌ ನಲ್ಲಿ ಈ ದುರಂತ ಸಂಭವಿಸಿದ್ದು,ಮೃತರಲ್ಲಿ ಇಬ್ಬರು ದಂಪತಿಗಳು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೂಮಿನಲ್ಲಿಯ ಗ್ಯಾಸ್ ಹೀಟರ್‌ನ್ನು ಬಳಸಿದ್ದ ಈ ಮೃತರು ಗ್ಯಾಸ್ ಸೋರಿಕೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸುಶೀಲ ಸಿಂಗ್ ರಾಠೋಡ್ ತಿಳಿಸಿದರು.

ಕೋಣೆಯ ಎಲ್ಲ ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಹೆಲಿಕಾಪ್ಟರ್ ಮೂಲಕ ಕಾಠ್ಮಂಡುವಿನ ಎಚ್‌ಎಎಂಎಸ್ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಅವರೆಲ್ಲ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News