4,061 ಕೋ.ರೂ. ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ

Update: 2020-01-21 15:44 GMT

ಮುಂಬೈ,ಜ.21: ಕಾನ್ಪುರದ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಮುಂಬೈನ ಫ್ರಾಸ್ಟ್ ಇಂಟರ್‌ನ್ಯಾಷನಲ್ ಮತ್ತು ಅದರ ಇಬ್ಬರು ನಿರ್ದೇಶಕರಾದ ಉದಯ ಜಯಂತ ದೇಸಾಯಿ ಮತ್ತು ಸುಜಯ ಉದಯ ದೇಸಾಯಿ ಹಾಗೂ ಇತರ 12 ಜನರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಕಂಪನಿಯ ಪ್ರವರ್ತಕರು/ನಿರ್ದೇಶಕರು ಯಾವುದೇ ಪ್ರಾಮಾಣಿಕ ಉದ್ಯಮ ವಹಿವಾಟುಗಳನ್ನು ಹೊಂದಿರದೆ ವಿದೇಶಗಳಿಗೆ ಸರಕು ಸಾಗಣೆಯ ಸೋಗಿನಲ್ಲಿ ಸಂಚಿನಲ್ಲಿ ಶಾಮೀಲಾಗಿದ್ದಾರೆ ಮತ್ತು ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 14 ಬ್ಯಾಂಕುಗಳ ಕೂಟಕ್ಕೆ 4061.95 ಕೋ.ರೂ.ಗಳ ಸಾಲ ಮರುಪಾವತಿಸದೆ ವಂಚಿಸಿದ್ದಾರೆ ಎಂದು ಬ್ಯಾಂಕು ದೂರಿನಲ್ಲಿ ಆರೋಪಿಸಿದೆ.

ವಂಚನೆ,ಕ್ರಿಮಿನಲ್ ಒಳಸಂಚು ಮತ್ತು ಫೋರ್ಜರಿ ಆರೋಪಗಳಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಬಿಐ 14 ಆರೋಪಿಗಳು ದೇಶ ತೊರೆಯುವುದನ್ನು ತಡೆಯಲು ಅವರ ವಿರುದ್ಧ ಲುಕ್ ಔಟ್ ಸುತ್ತೋಲೆಗಳನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News