ಬ್ರಿಟನ್: ಸಿಎಎ ವಿರುದ್ಧ ನಿರ್ಣಯ ಮಂಡಿಸಲಿರುವ ಲೇಬರ್ ಪಕ್ಷದ ಸಂಸದರು

Update: 2020-01-21 15:56 GMT

ಲಂಡನ್, ಜ.21: ವಿವಾದಾತ್ಮಕ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಭಾರತದ ಜನತೆಗೆ ಉಂಟಾಗಿರುವ ಆತಂಕದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಶೀಘ್ರ ನಿರ್ಣಯ ಮಂಡಿಸಿ ಚರ್ಚೆ ನಡೆಸಲಾಗುವುದು ಎಂದು ಬ್ರಿಟನ್‌ನ ಲೇಬರ್ ಪಕ್ಷದ ಸಂಸದರು ಭರವಸೆ ನೀಡಿದ್ದಾರೆ.

ಸೋಮವಾರ ಬ್ರಿಟನ್‌ನ ಪ್ಯಾಲೇಸ್ ಆಫ್ ವೆಸ್ಟ್‌ಮಿನಿಸ್ಟರ್‌ನಲ್ಲಿ ಸೌತ್ ಏಶ್ಯಾ ಸಾಲಿಡ್ಯಾರಿಟಿ ಗ್ರೂಫ್, ಕ್ಯಾಚ್‌ವಾಚ್ ಯುಕೆ ಸಂಘಟನೆಯ ಸದಸ್ಯರು ಹಾಗೂ ಕಾನೂನು ತಜ್ಞ ಗೌತಮ್ ಭಾಟಿಯಾ ಬ್ರಿಟನ್‌ನ ಸಂಸದರಾದ ಸ್ಟೀಫನ್ ಟಿಮ್ಸ್, ರೂಪಾ ಹಕ್, ಕ್ಲಾಡಿಯಾ ವೆಬ್‌ರನ್ನು ಭೇಟಿಯಾಗಿ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಭಾರತದ ಜನರಲ್ಲಿ ಉಂಟಾಗಿರುವ ಆತಂಕವನ್ನು ವಿವರಿಸಿದರು.

ಈ ಸಂದರ್ಭ ಸಂಸದರು ಪೌರತ್ವ ಕಾಯ್ದೆ ಜಾರಿಯಿಂದ ಭಾರತದಲ್ಲಿ ಅಲ್ಪಸಂಖ್ಯಾತರ ಸಾಮೂಹಿಕ ಹಕ್ಕು ನಿರಾಕರಣೆಯ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಓವರ್‌ಸೀಸ್ ಸಿಟಿಜನ್ಸ್ ಆಫ್ ಇಂಡಿಯಾ ಸ್ಥಾನಮಾನ ಹೊಂದಿರುವ ಬ್ರಿಟಿಷ್ ಪೌರರಿಗೆ ಆಗಲಿರುವ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಮಂಡಿಸುವ ಭರವಸೆ ನೀಡಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News