ಬುಶ್‌ಫೈರ್ ಕ್ರಿಕೆಟ್ ಬ್ಯಾಶ್‌ಗೆ ಸಚಿನ್, ವಾಲ್ಶ್

Update: 2020-01-21 18:02 GMT

ಕೋಚ್ ಮುಂಬೈ, ಜ.21: ಕಾಡ್ಗಿಚ್ಚು ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಲು ಮುಂದಿನ ತಿಂಗಳು ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡುಲ್ಕರ್ ಮತ್ತು ವೆಸ್ಟ್ ಇಂಡೀಸ್ ವೇಗದ ಬೌಲಿಂಗ್ ಗ್ರೇಟ್ ಕರ್ಟ್ನಿ ವಾಲ್ಶ್ ಕ್ರಮವಾಗಿ ಪಾಂಟಿಂಗ್ ಇಲೆವೆನ್ ಮತ್ತು ವಾರ್ನ್ ಇಲೆವೆನ್‌ಗೆ ಕೋಚ್ ಆಗಲಿದ್ದಾರೆ.

ಸಚಿನ್ ಮತ್ತು ಕರ್ಟ್ನಿ ಅವರನ್ನು ಮತ್ತೆ ಆಸ್ಟ್ರೇಲಿಯಕ್ಕೆ ಸ್ವಾಗತಿಸುತ್ತಿರುವುದು ನಮಗೆ ಸಂತಸವಾಗಿದೆ. ಅಲ್ಲಿ ಇಬ್ಬರೂ ಆಟಗಾರರಾಗಿ ಸಾಕಷ್ಟು ಯಶಸ್ಸನ್ನು ಕಂಡವರು ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆವಿನ್ ರಾಬರ್ಟ್ಸ್ ಹೇಳಿದರು.

ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಸಚಿನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಆಟಗಾರ. ಅವರು ಅತ್ಯಧಿಕ ರನ್ ಗಳಿಸಿದವರು. ವಾಲ್ಶ್ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿದವರು. 500ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದವರು. ಚಾರಿಟಿ ಪಂದ್ಯವು ಫೆಬ್ರವರಿ 8ರಂದು ನಡೆಯಲಿದ್ದು, ಆದರೆ ಸ್ಥಳ ಇನ್ನೂ ನಿರ್ಧರಿಸಲಾಗಿಲ್ಲ. ಅದೇ ದಿನ ಎರಡೂ ಪಂದ್ಯಗಳು ನಡೆಯಲಿದೆ. ಅದೇ ದಿನ ಜಂಕ್ಷನ್ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ಮಹಿಳಾ ತಂಡಗಳ ನಡುವೆ ಟ್ವೆಂಟಿ-20 ಪಂದ್ಯ ನಡೆಯಲಿದೆ. ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗರಾದ ಪಾಂಟಿಂಗ್, ವಾರ್ನ್, ಜಸ್ಟಿನ್ ಲ್ಯಾಂಗರ್, ಆ್ಯಡಮ್ ಗಿಲ್‌ಕ್ರಿಸ್ಟ್, ಬ್ರೆಟ್ ಲೀ, ಶೇನ್ ವ್ಯಾಟ್ಸನ್, ಅಲೆಕ್ಸ್ ಬ್ಲ್ಯಾಕ್‌ವೆಲ್ ಮತ್ತು ಮೈಕೆಲ್ ಕ್ಲಾರ್ಕ್ ಸೇರಿದ್ದಾರೆ. ಸ್ಟೀವ್ ವಾ ಮತ್ತು ಮೆಲ್ ಜೋನ್ಸ್ ಭಾಗಿಯಾಗಲಿದ್ದಾರೆ. ಪಂದ್ಯದ ವೇಳೆ ಸಂಗ್ರಹವಾಗುವ ಹಣವು ಆಸ್ಟ್ರೇಲಿಯದ ರೆಡ್‌ಕ್ರಾಸ್ ವಿಪತ್ತು ಪರಿಹಾರ ನಿಧಿಗೆ ಸೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News