ಅಪೂರ್ವಿ ಚಂದೇಲಾ, ದಿವ್ಯಾಂಶ್ ಸಿಂಗ್ ಪನ್ವಾರ್ ಗೆ ಚಿನ್ನ

Update: 2020-01-21 18:14 GMT

ಇನ್ಸ್‌ಬ್ರೂಕ್ , ಜ.21: ಆಸ್ಟ್ರಿಯಾದಲ್ಲಿ ನಡೆಯುತ್ತಿರುವ ಮೈಟನ್ ಕಪ್ ಅಂತರ್‌ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್‌ಗಳಾದ ಅಪೂರ್ವಿ ಚಂದೇಲಾ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನ ಜಯಿಸಿದರು.

 ಅಪೂರ್ವಿ ಚಂದೇಲಾ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಅಂತಿಮವಾಗಿ 251.4 ಪಾಯಿಂಟ್ಸ್ ದಾಖಲಿಸಿ ಚಿನ್ನ ಗೆದ್ದರು. ಅಂಜುಮ್ ಮೌದ್ಗಿಲ್ (229) ಕಂಚು ಪಡೆದರು.

  ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ದಿವ್ಯಾಂಶ್ ಸಿಂಗ್ ಪನ್ವಾರ್ ( 249.7) ಅಗ್ರ ಗೌರವವನ್ನು ಗಳಿಸಿದರೆ, ದೀಪಕ್ ಕುಮಾರ್ (228 ) ಕಂಚು ತನ್ನದಾಗಿಸಿಕೊಂಡರು.

  

 ನಾಲ್ವರು ಭಾರತೀಯ ಶೂಟರ್‌ಗಳು ಈಗಾಗಲೇ ಟೋಕಿಯೋ ಒಲಿಂಪಿಕ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ 2018ರ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಂಜುಮ್ ಮತ್ತು ಅಪೂರ್ವಿ ಟೋಕಿಯೋ 2020 ಒಲಿಂಪಿಕ್‌ಗೆ ಅವಕಾಶ ಪಡೆದಿದ್ದರು.

  2019ರಲ್ಲಿ ಬೀಜಿಂಗ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದಿವ್ಯಾಂಶ್ ಸಿಂಗ್ ಒಲಿಂಪಿಕ್ ಕೋಟಾವನ್ನು ಗಳಿಸಿದ್ದರೆ, ದೋಹಾದಲ್ಲಿ ನಡೆದ 14ನೇ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ದೀಪಕ್ ಒಲಿಂಪಿಕ್‌ನಲ್ಲಿ ಪದಕ ಬೇಟೆ ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ.ಟೋಕಿಯೋ ಒಲಿಂಪಿಕ್ಸ್ ಜುಲೈ 24ರಿಂದ ಪ್ರಾರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News