ನಡಾಲ್ ಎರಡನೇ ಸುತ್ತಿಗೆ

Update: 2020-01-21 18:26 GMT

ಮೆಲ್ಬೋರ್ನ್, ಜ.21: ವಿಶ್ವದ ನಂ. 1 ಆಟಗಾರ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಗಳಿಸುವ ಮೂಲಕ 20 ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ರಫೆಲ್ ನಡಾಲ್ ಮಂಗಳವಾರ ಮೊದಲ ಸುತ್ತಿನ ಪಂದ್ಯದಲ್ಲಿ ಹ್ಯೂಗೊ ಡೆಲಿಯನ್ ಅವರನ್ನು 6-2, 6-3, 6-0 ಅಂತರದಲ್ಲಿ ಸೋಲಿಸಿದರು.

ರಾಡ್ ಲಾವರ್ ಅರೆನಾದಲ್ಲಿ ಕೇವಲ ಎರಡು ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ನಡಾಲ್ ಅವರು ಹ್ಯೂಗೊ ಅವರಿಗೆ ಮೇಲುಗೈ ಸಾಧಿಸಲು ಅವಕಾಶ ನೀಡದೆ ಗೆಲುವಿನ ನಗೆ ಬೀರಿದರು.

ನಡಾಲ್ ಅವರು ಮೆಲ್ಬೋರ್ನ್ ಪಾರ್ಕ್‌ನಲ್ಲಿ 2009 ರಂದು ಒಂದು ಬಾರಿ ಮಾತ್ರ ಫೆಡರರ್ ವಿರುದ್ಧ ಪ್ರಶಸ್ತಿಯನ್ನು ಗೆದ್ದಿದ್ದಾರೆ. 33 ವರ್ಷದ ನಡಾಲ್ ನಾಲ್ಕು ಬಾರಿ ಫೈನಲ್‌ಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ನನಗೆ ಇದು ಸಕಾರಾತ್ಮಕ ಆರಂಭವಾಗಿದೆ. ಮೊದಲ ಸುತ್ತಿನ ಗೆಲುವು ಮತ್ತು ಮೂರು ಸೆಟ್‌ಗಳಲ್ಲಿ ಪ್ರದರ್ಶನ ಇನ್ನೂ ಉತ್ತಮವಾಗಿತ್ತು ಎಂದು ನಡಾಲ್ ಹೇಳಿದರು. ಡೆಲಿಯನ್ ಪಂದ್ಯಗಳನ್ನು ಗೆಲ್ಲುವ ಅವಕಾಶಗಳನ್ನು ಹೊಂದಿದ್ದರು ಎಂದು ಕಳೆದ ವರ್ಷದ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತ ನಡಾಲ್ ಹೇಳಿದರು.

ಎರಡನೇ ಸುತ್ತಿನಲ್ಲಿ ನಡಾಲ್‌ಗೆ ಅರ್ಜೆಂಟೀನಾದ ಫೆಡೆರಿಕೊ ಡೆಲ್ಬೊನಿಸ್ ಅಥವಾ ಪೋರ್ಚುಗಲ್‌ನ ಜೊವಾವೊ ಸೌಸಾ ಸವಾಲು ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News