ಒಂದೇ ದಿನದಲ್ಲಿ ಕನ್ನಡ ಮಾಧ್ಯಮಗಳ 'ವರದಿ'ಗಾರಿಕೆಯಲ್ಲಿ 'ಸ್ಫೋಟಕ' ತಿರುವು!

Update: 2020-01-22 11:58 GMT

ಮಂಗಳೂರು: ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕವೊಂದು ಪತ್ತೆಯಾಗಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ತಂದಿರಿಸಿದ್ದ ಆರೋಪಿ ಆದಿತ್ಯ ರಾವ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ನಡುವೆ 'ಸ್ಫೋಟಕ ಪ್ರಕರಣ'ಕ್ಕೆ ಸಂಬಂಧಿಸಿ ರಾಜ್ಯದ ಮಾಧ್ಯಮಗಳು ಪ್ರಕಟಿಸಿದ್ದ ವರದಿಗಳು ಒಂದೇ ದಿನದಲ್ಲಿ ಹೇಗೆಲ್ಲಾ ಬದಲಾಗಿವೆ ಮತ್ತು ಆರೋಪಿ ಪತ್ತೆಯಾಗುವ ಹಾಗು ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ಮೂಡುವ ಮೊದಲು ಮಾಧ್ಯಮಗಳು ಈ ಪ್ರಕರಣವನ್ನು ಯಾವೆಲ್ಲ ದೃಷ್ಟಿಕೋನದಿಂದ ನೋಡಿದವು ಎನ್ನುವುದನ್ನು ಈ ಕೆಳಗಿನ ಸ್ಕ್ರೀನ್ ಶಾಟ್ ಗಳು ತೋರಿಸುತ್ತವೆ.

ಈಗ ಪ್ರಕರಣದ ಹಿಂದಿರುವ ಆರೋಪಿ ಬಂಧನವಾದ ಮೇಲೆ  ಜನರು ಮಾಧ್ಯಮಗಳಿಗೆ ಕೇಳುತ್ತಿರುವ ಪ್ರಶ್ನೆಗಳು ಇಲ್ಲಿವೆ:

'ಸ್ಫೋಟಕ'ವನ್ನು ಬಾಂಬ್ ಎಂದು ಹೇಳಿದ್ದು ಯಾರು?

ಸ್ಫೋಟಕ 10 ಕೆ.ಜಿ. ಭಾರವಿದೆ ಎಂದದ್ದು ಯಾರು?

ಸ್ಫೋಟಕ ಸಿಡಿಸಿದ ಒಂದಡಿಯೂ ಇಲ್ಲದ ಗುಂಡಿಯನ್ನು 12 ಅಡಿ ಆಳ ಎಂದಿದ್ದು ಯಾರು?

ಸ್ಫೋಟಕಕ್ಕೂ ಮಂಗಳೂರು ಗೋಲಿಬಾರ್ ಗೂ ನಂಟಿದೆ ಎಂದವರು ಯಾರು?

ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೂ ಸ್ಪೋಟಕಕ್ಕೂ ಸಂಬಂಧ ಕಲ್ಪಿಸಿದ್ದು ಯಾರು ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News