ವಿನಾಶವನ್ನು ಪ್ರತಿಪಾದಿಸುವ ಪರಿಸರ ಭವಿಷ್ಯಕಾರರು!: ಡೊನಾಲ್ಡ್ ಟ್ರಂಪ್ ಬಣ್ಣನೆ

Update: 2020-01-22 16:22 GMT

ಡಾವೋಸ್, ಜ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಡಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ‘ವಿನಾಶವನ್ನು ಪ್ರತಿಪಾದಿಸುವ ಪರಿಸರ ಭವಿಷ್ಯಕಾರ’ರ ವಿರುದ್ಧ ಹರಿಹಾಯ್ದರು ಹಾಗೂ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್‌ರ ಪರಿಸರ ಎಚ್ಚರಿಕೆಗಳನ್ನು ತಳ್ಳಿಹಾಕಿದರು. ಬದಲಿಗೆ, ಅಮೆರಿಕದ ಆರ್ಥಿಕತೆಯಲ್ಲಿ ‘ಅಭೂತಪೂರ್ವ’ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡರು.

ಹವಾಮಾನ ಬದಲಾವಣೆಗೆ ಒತ್ತು ನೀಡುವ ಉದ್ದೇಶದ ವೇದಿಕೆಯ 50ನೇ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ‘ನಮ್ಮ ಮನೆ ಈಗಲೂ ಉರಿಯುತ್ತಿದೆ’ ಎಂಬ ಗ್ರೆಟಾ ತನ್‌ಬರ್ಗ್‌ರ ಎಚ್ಚರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳಲು ನನಗೆ ಸಮಯವಿಲ್ಲ ಎಂದರು.

‘‘ವರ್ಷವಿಡೀ ವಿನಾಶದ ಬಗ್ಗೆ ಭವಿಷ್ಯ ಹೇಳುವವರು ಮತ್ತು ಅವರ ಪ್ರಳಯದ ಭವಿಷ್ಯಗಳನ್ನು ನಾವು ತಿರಸ್ಕರಿಸಬೇಕು’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು. ‘‘ನಾವು ಕೆಟ್ಟದಾಗಿ ಕಾರ್ಯನಿರ್ವಹಿಸುವುದನ್ನು ನೋಡಲು ಅವರು ಬಯಸುತ್ತಾರೆ’’ ಎಂದರು.

 ನಿಯಂತ್ರಣ ತಪ್ಪಿದ ಜಾಗತಿಕ ತಾಪಮಾನ ಮತ್ತು ಇತರ ಪರಿಸರ ವಿಪತ್ತುಗಳ ಬಗ್ಗೆ ಎಚ್ಚರಿಕೆ ನೀಡುವವರು, ಹಿಂದಿನ ಕಾಲದ ಮೂರ್ಖ ಭವಿಷ್ಯ ಹೇಳುವವರ ವಾರೀಸುದಾರರಾಗಿದ್ದಾರೆ ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News