ಕಾಯಿಲೆಪೀಡಿತ ಗ್ರಹದ ಆರೋಗ್ಯ ರಕ್ಷಿಸಿ: ಸ್ವಿಟ್ಝರ್‌ಲ್ಯಾಂಡ್ ಅಧ್ಯಕ್ಷೆಯ ಭಾವನಾತ್ಮಕ ಮನವಿ

Update: 2020-01-22 16:41 GMT

ಡಾವೋಸ್, ಜ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣಕ್ಕೂ ಮೊದಲು, ಆತಿಥೇಯ ದೇಶ ಸ್ವಿಟ್ಝರ್‌ ಲ್ಯಾಂಡ್‌ನ ಅಧ್ಯಕ್ಷೆ ಸಿಮೊನೆಟ ಸೊಮರುಗ ಅದೇ ವೇದಿಕೆಯಲ್ಲಿ, ಕಾಯಿಲೆಪೀಡಿತ ಗ್ರಹದ ಆರೋಗ್ಯವನ್ನು ರಕ್ಷಿಸುವಂತೆ ಭಾವನಾತ್ಮಕ ಮನವಿ ಮಾಡಿದರು.

ಇದಕ್ಕೆ ವಿರುದ್ಧವಾಗಿ, ಟ್ರಂಪ್ ಜಾಗತಿಕ ತಾಪಮಾನ ಎಂಬ ಪದವನ್ನೂ ತನ್ನ ಭಾಷಣದಲ್ಲಿ ಬಳಸಲಿಲ್ಲ. ಆದರೆ, ಜಾಗತಿಕ ತಾಪಮಾನ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಹಾಗೂ ಅದು ಮನುಕುಲದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಹೊಂದಿದೆ ಎಂದು ಬಹುತೇಕ ಎಲ್ಲ ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News