ನೌಶಿನ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ-ಹ್ಯುಮ್ಯಾನಿಟಿ ಫೋರಮ್ ವತಿಯಿಂದ ಪರಿಹಾರದ ಚೆಕ್ ಹಸ್ತಾಂತರ

Update: 2020-01-23 08:13 GMT

ಮಂಗಳೂರು, ಜ.23: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿ.19ರಂದು ಮಂಗಳೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಭವಿಸಿದ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಕುದ್ರೋಳಿಯ ನೌಶಿನ್ ಕುಟುಂಬಕ್ಕೆ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಹ್ಯುಮ್ಯಾನಿಟಿ  ಫೋರಮ್ ಮಂಗಳೂರು’ ಇದರ ವತಿಯಿಂದ ಗುರುವಾರ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು.

ಕುದ್ರೋಳಿಯ ಮನೆಗೆ ಭೇಟಿ ನೀಡಿದ ತಂಡದ ನೇತೃತ್ವ ವಹಿಸಿದ್ದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು ದಾನಿಗಳ ನೆರವಿನಿಂದ ಸಂಗ್ರಹಿಸಲಾದ 10 ಲಕ್ಷ ರೂ. ಮೊತ್ತದ ಸಹಾಯಧನದ ಚೆಕ್ಕನ್ನು ನೀಡಿದರು.

ಈ ಸಂದರ್ಭ ಬಿಸಿಸಿಐ ಅಧ್ಯಕ್ಷ ಎಸ್‌ಎಂ ರಶೀದ್ ಹಾಜಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಬಿಸಿಸಿಐನ ಇಸ್ಮಾಯೀಲ್ ಉಳ್ಳಾಲ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ಹ್ಯುಮ್ಯಾನಿಟಿ  ಫೋರಮ್ ಮಂಗಳೂರು ಇದರ ಆಸೀಫ್ ಡೀಲ್ಸ್, ಅಬ್ದುಲ್ ಜಲೀಲ್, ಕಾರ್ಪೊರೇಟರ್ ಸಂಶುದ್ದೀನ್ ಕುದ್ರೋಳಿ, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಸಿಎಂ ಮುಸ್ತಫಾ, ಹನೀಫ್ ಸಿಎಂ, ಎಂ.ಎ.ಅಶ್ರಫ್, ಮೊಯ್ದಿನ್ ಮೋನು, ಮುಹಮ್ಮದ್ ಬಪ್ಪಳಿಗೆ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News