ಶಂಕಿತ ಉಗ್ರ ಆದಿತ್ಯ ರಾವ್‌ಗೆ 10 ದಿನ ಪೊಲೀಸ್ ಕಸ್ಟಡಿ

Update: 2020-01-23 11:24 GMT
ಆದಿತ್ಯ ರಾವ್‌

ಮಂಗಳೂರು, ಜ. 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ (37) ಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬೆಂಗಳೂರಿನಿಂದ ಬುಧವಾರ ರಾತ್ರಿ ಕರೆತಂದಿದ್ದ ಮಂಗಳೂರು ಪೊಲೀಸರು, ಆರೋಪಿಯನ್ನು ಮಂಗಳೂರಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್. ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News