ಅಂತರಾಷ್ಟ್ರೀಯ ರೋಬೋವಾರ್ ಸ್ಪರ್ಧೆ : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತಂಡಕ್ಕೆ ಪ್ರಶಸ್ತಿ

Update: 2020-01-23 12:01 GMT

ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಸಕ್ತ ವಿದ್ಯಾರ್ಥಿ ಗಳನ್ನು ಒಳಗೊಂಡ ತಂಡವು ಐಐಟಿ ಬಾಂಬೆಯಲ್ಲಿ ನಡೆದ ಅಂತರಾಷ್ಟ್ರೀಯ ರೋಬೋವಾರ್ ಸ್ಪರ್ಧೆಯಲ್ಲಿ ಚಾಂಪಿಯನ್‍ಶಿಪ್ ಗೆಲ್ಲುವ ಮೂಲಕ ಕಾಲೇಜಿಗೆ ಪ್ರಶಸ್ತಿಗಳನ್ನು ತಂದಿತು. ಐಐಟಿ ಬಾಂಬೆಯ ವಾರ್ಷಿಕ ಟೆಕ್ ಫೆಸ್ಟ್‍ನಲ್ಲಿ ರೋಬೋವಾರ್ ಭಾರತದ ಅತಿದೊಡ್ಡ ರೋಬೋಟ್ ಸ್ಪರ್ಧೆಯಾಗಿದ್ದು, ಅಲ್ಲಿ ವಿಶ್ವದಾದ್ಯಂತದ ವಿದ್ಯಾರ್ಥಿಗಳು ರೋಬೋವಾರ್ ಚಾಂಪಿಯನ್ ಶೀರ್ಷಿಕೆಗಾಗಿ ಹೋರಾಡುತ್ತಾರೆ.

ಈ ವರ್ಷ, ಟೆಕ್ ಫೆಸ್ಟ್ 2020ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ರೋಬೋವಾರ್‍ನಲ್ಲಿ 8 ಕೆಜಿ ತೂಕದ ಹೊಸ ವಿಭಾಗವನ್ನು ಪರಿಚಯಿಸಲಾಯಿತು. ಮುಖ್ಯವಾಗಿ ಎಲೆಕ್ಟ್ರಾನಿಕ್ ಮತ್ತು ರೋಬೋಟಿಕ್ ಯೋಜನೆಗಳೊಂದಿಗೆ ವ್ಯವಹರಿಸುವ ಎಸ್‍ಜೆಇಸಿಯ ಹಳೆ ವಿದ್ಯಾರ್ಥಿಗಳ ಮೂಲದ ಸ್ಟಾರ್ಟ್‍ಅಪ್ ಕಂಪನಿಯಾದ ಸೋಲಿಕ್, ಎಸ್‍ಜೆಇಸಿಯ ತಂಡ ಟೆರರ್‍ಬುಲ್ ರೋಬೋಟಿಕ್ಸ್ ಇದರ ಸಹಯೋಗದೊಂದಿಗೆ, `ರಾಪ್ಟರ್' ಎಂಬ ಹೆಸರಿನ ಬಾಟ್  ಅನ್ನು ನಿರ್ಮಿಸಿ ರೋಬೋವಾರ್ 2020 ರಲ್ಲಿ 8 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿತು. ಒಟ್ಟಾರೆ 32 ತಂಡಗಳನ್ನೊಳಗೊಂಡ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ತಂಡವು ಭಾಗವಹಿಸಿ ವಿಜಯಿಯಾಯಿತು.

ತನ್ನ ಸ್ಥಿರತೆ, ನೋಟ, ಆಕ್ರಮಣಶೀಲತೆ ಮತ್ತು ವಿಶಿಷ್ಟ ಶಸ್ತ್ರಾಸ್ತ್ರ ವಿನ್ಯಾಸಕ್ಕಾಗಿ ಪ್ರಶಂಸಿಸಲ್ಪಟ್ಟ ಬಾಟ್‍ನ್ನು ಸೋಲಿಕ್‍ನ ಮೆಕ್ಯಾನಿಕಲ್ ಡಿಸೈನಿಂಗ್ ಇಂಜಿನಿಯರ್ ಜಾಯ್ಸನ್  ಡಿ'ಸೋಜಾ ವಿನ್ಯಾಸಗೊಳಿಸಿ, ಎಲೆಕ್ಟ್ರಾನಿಕ್ಸ್ ವಿನ್ಯಾಸವನ್ನು ಕ್ರಿಸ್ಟನ್ ಕೆನ್ನೆತ್ ಡಿಸೋಜ ಮತ್ತು ಸೋಲಿಕ್‍ನ ಸಹ-ಸಂಸ್ಥಾಪಕರಾದ ಸುಜನ್ ಶೆಟ್ಟಿ ಮಾಡಿದ್ದಾರೆ. ಬಾಟ್ ಅನ್ನು ಎಸ್‍ಜೆಇಸಿ ವಿದ್ಯಾರ್ಥಿ ಮತ್ತು ಟೀಮ್ ಟೆರರ್‍ಬುಲ್ ರೊಬೊಟಿಕ್ಸ್‍ನ ಸದಸ್ಯ ವೀಕ್ಷಿತ್ ಶೆಟ್ಟಿ ಅವರು ನಿಯಂತ್ರಿಸಿದರು.

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯು ತಂಡದ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾ, ತಂಡ ಸದಸ್ಯರ ಅತ್ಯುತ್ತಮ ಪ್ರಯತ್ನಗಳನ್ನು ಅಭಿನಂದಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News