ಎಎಸ್ಸೈ ಹುದ್ದೆಗಳಿಗೆ ಉಚಿತ ತರಬೇತಿ

Update: 2020-01-23 12:13 GMT

ಮಂಗಳೂರು, ಜ. 23: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ 2019-20ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌದ್ಧ ಮತ್ತು ಪಾರ್ಸಿ) ಪದವಿ ಪಡೆದಿರುವ 21ರಿಂದ 30 ವಯಸ್ಸಿನ ಅಭ್ಯರ್ಥಿಗಳಿಗೆ 90 ದಿನಗಳ ಊಟ ಮತ್ತು ವಸತಿಯೊಂದಿಗೆ ಬೆಳಗಾವಿ, ಬೆಂಗಳೂರು, ಮೈಸೂರು, ಕಲ್ಬುರ್ಗಿ, ಧಾರವಾಡ, ಶಿವಮೊಗ್ಗ, ಜಯಪುರ, ಬಳ್ಳಾರಿ, ದಾವಣಗೆರೆ, ಮಂಗಳೂರು ಕೇಂದ್ರಗಳಲ್ಲಿ ಉಚಿತ ತರಬೇತಿ ನೀಡಲಾಗುವುದು.

ಜ.31ರೊಳಗೆ https://gokdom.kar.nic.in ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್‌ಕಾಪಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿಗೆ ನೀಡಬೇಕು. ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿ, ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News