​ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ : ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ-ಮಾರಾಟ

Update: 2020-01-23 14:44 GMT

ಉಡುಪಿ, ಜ.23: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖೆಯಲ್ಲಿ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜ.2ರಿಂದ ಫೆ.2ರವರೆಗೆ ಮಳಿಗೆಯಲ್ಲಿ ನಡೆಯುತ್ತಿದೆ.

ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳು ಪ್ರದರ್ಶನ ದಲ್ಲಿವೆ. ಮೈನ್‌ನಲ್ಲಿ ವಜ್ರಾಭಾರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿವೆ. ಡಿವೈನ್‌ನಲ್ಲಿ ಭಾರತೀಯ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ.

ಇನ್ನು ಪ್ರಿಶಿಯಲ್ಲಿ ರುಬಿ, ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ಎಥಿನಿಕ್ಸ್‌ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ಏರ ಆನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ ಹಾಯ್ ಯುವತಿಯರ ಮನಸೆಳೆಯುವ ಮನಮೋಹಕ ಆಭರಣಗಳಿವೆ.

ಸ್ಟಾರ್ಲೆಟ್‌ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ. ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆಯ, ವಿನಿಮಯದಲ್ಲಿ ಶೂನ್ಯ ಕಡಿತದ, ಬೈಬ್ಯಾಕ್ ಗ್ಯಾರಂಟಿ ಹೊಂದಿರುವ , ಉಚಿತ ವಿಮೆ, ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿರುವ, 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ವಿಶೇಷತೆಗಳಾಗಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಮತ್ತು ಶೇ.10ರಷ್ಟು ಕಡಿತ ವಜ್ರದ ಮೌಲ್ಯದ ಮೇಲೆ ಹಾಗೂ ವಿಶೇಷ ಕಡಿತ ಬ್ರಾಂಡೆಡ್ ವಾಚ್‌ಗಳ ಮೇಲೆ ನೀಡಲಾಗುವುದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖೆಯ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News