ಆಸ್ಟ್ರೇಲಿಯನ್ ಓಪನ್‌: ನಡಾಲ್ ಮೂರನೇ ಸುತ್ತಿಗೆ

Update: 2020-01-23 18:19 GMT

ಮೆಲ್ಬೋರ್ನ್, ಜ.23: ಅಗ್ರ ಶ್ರೇಯಾಂಕಿತ ಆಟಗಾರ ರಫೆಲ್ ನಡಾಲ್ ಗುರುವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಅರ್ಜೆಂಟೀನಾದ ಫೆಡೆರಿಕೊ ಡೆಲ್ಬೊನಿಸ್ ವಿರುದ್ಧ 6-3 , 7-6 (4), 6-1 ಅಂತರದಿಂದ ಜಯಗಳಿಸಿ ಮೂರನೇ ಸುತ್ತಿಗೆ ಕಾಲಿಟ್ಟರು.

11 ವರ್ಷಗಳ ನಂತರ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಾಗಿ ಮತ್ತೊಮ್ಮೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗೆ ಪ್ರಯತ್ನ ಮುಂದುವರಿಸಿರುವ ಸ್ಪೇನ್‌ನ ನಡಾಲ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ತನ್ನ ಕೊನೆಯ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರು ಸೆಟ್‌ಗಳನ್ನು ಮಾತ್ರ ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತಿದ್ದಾರೆ.

    ರಾಡ್ ಲಾವರ್ ಅರೆನಾದಲ್ಲಿ ಎರಡೂವರೆ ಗಂಟೆಗಳ ನಡೆದ ಹಣಾಹಣಿಯಲ್ಲಿ ಅದರಲ್ಲೂ ವಿಶೇಷವಾಗಿ 19 ಬಾರಿ ಗ್ರಾನ್ ಸ್ಲಾಮ್ ಚಾಂಪಿಯನ್ ವಿರುದ್ಧ ವಿಶ್ವದ 76 ನೇ ಕ್ರಮಾಂಕದ ಆಟಗಾರ ಡೆಲ್ಬೊನಿಸ್ ಅವರಿಗೆ ಒಂದೇ ಒಂದು ಬ್ರೇಕ್ ಪಾಯಿಂಟ್‌ನ್ನು ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ.

      ಈ ಗೆಲುವಿನೊಂದಿಗೆ ನಡಾಲ್‌ಗೆ ಮೂರನೇ ಸುತ್ತಿನಲ್ಲಿ ತನ್ನ ದೇಶದವರಾಗಿರುವ ಪ್ಯಾಬ್ಲೊ ಕ್ಯಾರೆನೊ ಸವಾಲು ಎದುರಾಗಿದೆ. ನಡಾಲ್‌ಗೆ ಕ್ಯಾರೆನೊ ಎಟಿಪಿ ಕಪ್ ಡಬಲ್ಸ್‌ನಲ್ಲಿ ಜೊತೆಗಾರ ಆಗಿದ್ದಾರೆ.

  ನಡಾಲ್ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ 12, ಯುಎಸ್ ಓಪನ್‌ನಲ್ಲಿ ನಾಲ್ಕು ಮತ್ತು ವಿಂಬಲ್ಡನ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯ ಓಪನ್‌ನಲ್ಲಿ ಒಂದು ಬಾರಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು ಮೆಲ್ಬೋರ್ನ್‌ನಲ್ಲಿ ಎರಡನೇ ಪ್ರಶಸ್ತಿಯನ್ನು ಗೆದ್ದರೆ, ನಡಾಲ್ ಮಹಾನ್ ಪ್ರತಿಸ್ಪರ್ಧಿ ಆಗಿರುವ ಫೆಡರರ್ ಹೊಂದಿರುವ 20 ಗ್ರಾನ್ ಸ್ಲಾಮ್ ದಾಖಲೆಯನ್ನು ಸರಿಗಟ್ಟುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News