ಸಾಮೂಹಿಕ ವಿವಾಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-01-24 16:49 GMT

ಉಡುಪಿ, ಜ.24: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಎ.26ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ದೇವಾಲಯಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು. ಎಪ್ರಿಲ್ 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧುವಿಗೆ ನೀಡಬೇಕಾದ ಒಟ್ಟು 8 ಗ್ರಾಂ ತೂಕದ ಚಿನ್ನದ ತಾಳಿ ಮತ್ತು ಚಿನ್ನದ ಗುಂಡುಗಳನ್ನು ಪಾರದರ್ಶಕ ನಿಯಮದಂತೆ ಟೆಂಡರ್ ಕರೆದು ಖರೀದಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಸ್ಥಳೀಯ ಸಂಪ್ರದಾಯಕ್ಕೆ ತಕ್ಕಂತೆ ತಾಳಿಯ ಮಾದರಿ ಯನ್ನು ವಿನ್ಯಾಸಗೊಳಿಸುವಂತೆ ಹಾಗೂ ಸರಬ ರಾಜು ಮಾಡುವ ಚಿನ್ನವು ಕಡ್ಡಾಯವಾಗಿ 22 ಕ್ಯಾರೆಟ್ (916 ಹಾಲ್‌ಮಾರ್ಕ್) ಇರುವ ಬಗ್ಗೆ ದೃಢೀಕಣ ಪತ್ರ ಪಡೆಯುವಂತೆ ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತಂತೆ ದೇವಾಲಯಗಳಲ್ಲಿ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ಸಹಾಯಧನವನ್ನು ವಿವಾಹ ಸಂದರ್ಭ ದಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನುಡಿದರು.

ಎ.26ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮಾರ್ಚ್ 27ರವರೆಗೆ ವಧು-ವರರ ಹೆಸರುಗಳನ್ನು ನೊಂದಾಯಿ ಸಿಕೊಂಡು, ಎ.1ರಂದು ನೊಂದಾಯಿತ ವಧು- ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವಂತೆ ಹಾಗೂ ಈ ಪಟ್ಟಿಗೆ ಎ.6ವರೆಗೆ ಆಕ್ಷೇಪ ಸಲ್ಲಿಸಲು ದಿನಾಂಕ ನೀಡಿ, ಅಂತಿಮ ವಧು-ವರರ ಪಟ್ಟಿಯನ್ನು ಎ.11ರಂದು ಪ್ರಕಟಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ರವಿಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಸುಧಾಕರ್, ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿಗಳು, ಆಡಳಿತಾಧಿ ಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News