ಜ.26ರಂದು ಏಕತೆಗಾಗಿ ಸ್ವಾಭಿಮಾನ ಸಮಾವೇಶ

Update: 2020-01-24 16:59 GMT

 ಉಡುಪಿ, ಜ.24: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ರಾಜ್ಯ ಸಮಿತಿಯ ವತಿಯಿಂದ ಸಂವಿಧಾನ ಜಾರಿಯಾಗಿ 71ನೇ ವರ್ಷಾಚರಣೆ ಪ್ರಯುಕ್ತ ‘ಏಕತೆಗಾಗಿ ಸ್ವಾಭಿಮಾನದ ಸಮಾವೇಶ ಹಾಗೂ ನೀಲಿ ಭೀಮ ಸೈನ್ಯದ ಪಥಸಂಚಲನ’ ಜ.26ರಂದು ಬೆಳಗ್ಗೆ 11ಗಂಟೆಗೆ ಉಡುಪಿಯಲ್ಲಿ ನಡೆಯಲಿದೆ.

11ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್ ಬಳಿಯಿಂದ ಭೀಮ ಸೈನ್ಯದ ಪಥಸಂಚಲನ ಪ್ರಾರಂಭಗೊಳ್ಳಲಿದ್ದು, ಬಾಸೆಲ್ ಮಿಷನರೀಸ್ ಸ್ಮಾರಕ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದ ಸಂರಕ್ಷಣೆಗಾಗಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಏಕತೆಗಾಗಿ ಸ್ವಾಭಿಮಾನದ ಹೋರಾಟಕ್ಕಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್. ನಾರಾಯಣಸ್ವಾಮಿ ಹಾಗೂ ಇತರ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿ ದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ರಾಜ್ಯ ಸಮಿತಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News