15ರ ಬಾಲಕಿ ಗೌಫ್‌ಗೆ ಶರಣಾದ ಹಾಲಿ ಚಾಂಪಿಯನ್ ಒಸಾಕಾ

Update: 2020-01-24 18:18 GMT

ಮೆಲ್ಬೋರ್ನ್, ಜ.24: ಶ್ರೇಯಾಂಕರಹಿತ 15ರ ಹರೆಯದ ಬಾಲಕಿ ಕೊಕೊ ಗೌಫ್ ಹಾಲಿ ಚಾಂಪಿಯನ್ ನವೊಮಿ ಒಸಾಕಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ದೊಡ್ಡ ಬೇಟೆಯಾಡಿದರು.

 ಈ ವರ್ಷ ಆಸ್ಟ್ರೇಲಿಯನ್ ಓಪನ್‌ಗೆ ಪಾದಾರ್ಪಣೆಗೈದಿರುವ ಅಮೆರಿಕದ ಗೌಫ್ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಒಸಾಕಾರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಭಾರೀ ಅಂತರದಿಂದ ಸೋತಿದ್ದ ಗೌಫ್ ಇದೀಗ ಸೇಡು ತೀರಿಸಿಕೊಂಡರು.

 ಪ್ರಧಾನ ಸುತ್ತಿಗೆ ತಲುಪಿರುವ ಕಿರಿಯ ವಯಸ್ಸಿನ ಆಟಗಾರ್ತಿ ಗೌಫ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅಥವಾ ಚೀನಾದ ಝಾಂಗ್ ಶುಐ ಅವರನ್ನು ಎದುರಿಸಲಿದ್ದಾರೆ. ಸ್ವಲ್ಪ ಸಮಯ ಸೆರೆನಾ ವಿಲಿಯಮ್ಸ್ ಜೊತೆ ತರಬೇತಿ ಪಡೆದಿದ್ದ ಗೌಫ್, ನನಗೆ ಹೆಚ್ಚು ಭಯವಾಗಿರಲಿಲ್ಲ. ಹೆಚ್ಚು ಆಕ್ರಮಣಕಾರಿಯಾಗಿ ಆಡಿದ್ದೆ ಎಂದರು. ಗೌಫ್ ಹಾಗೂ ಒಸಾಕಾ ಐದು ತಿಂಗಳ ಹಿಂದೆ ನ್ಯೂಯಾರ್ಕ್ ನಲ್ಲಿ ಮೂರನೇ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News