ಭಾರತ ವಿರುದ್ಧ ಕಿವೀಸ್‌ಗೆ 193 ರನ್ ಗುರಿ

Update: 2020-01-24 18:20 GMT

ಬ್ಲೋಮ್‌ಫೊಂಟೇನ್, ಜ.24: ಮಳೆಬಾಧಿತ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ಗೆಲುವಿಗೆ 193 ರನ್ ಗುರಿ ನೀಡಿದೆ.

ಶುಕ್ರವಾರ ಮಳೆಯಿಂದಾಗಿ ಪಂದ್ಯವನ್ನು 23 ಓವರ್‌ಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್(ಔಟಾಗದೆ 57, 77 ಎಸೆತ, 4 ಬೌಂಡರಿ,2 ಸಿಕ್ಸರ್)ಹಾಗೂ ಸಕ್ಸೇನ(ಔಟಾಗದೆ 52, 62 ಎಸೆತ, 6 ಬೌಂಡರಿ) ಅರ್ಧಶತಕ ಕೊಡುಗೆ ನೀಡಿದರು.

ನ್ಯೂಝಿಲ್ಯಾಂಡ್ ಡಕ್‌ವರ್ತ್ ನಿಯಮದ ಪ್ರಕಾರ ಗೆಲ್ಲಲು 23 ಓವರ್‌ಗಳಲ್ಲಿ 193 ರನ್ ಪರಿಷ್ಕೃತ ಗುರಿ ಪಡೆಯಿತು. 11ನೇ ಓವರ್ ಅಂತ್ಯಕ್ಕೆ ಕಿವೀಸ್ 99 ರನ್‌ಗೆ 3 ವಿಕೆಟ್ ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News