ದಾಖಲೆಯ 8ನೇ ಪ್ರಶಸ್ತಿಯತ್ತ ನೊವಾಕ್ ಜೊಕೊವಿಕ್

Update: 2020-01-24 18:29 GMT

ಮೆಲ್ಬೋರ್ನ್,ಜ.24: ಜಪಾನ್‌ನ ಯೊಶಿಹಿಟೊ ನಿಶಿಯೊಕಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ತಲುಪಿದ್ದಾರೆ.

ಹಾಲಿ ಚಾಂಪಿಯನ್ ಜೊಕೊವಿಕ್ ಕೇವಲ 85 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಯೊಶಿಹಿಟೊರನ್ನು 6-3, 6-2, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. 50ನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-16ನೇ ಸುತ್ತು ತಲುಪಿದ್ದಾರೆ. ರೋಜರ್ ಫೆಡರರ್(67 ಬಾರಿ)ಬಳಿಕ ಈ ಸಾಧನೆ ಮಾಡಿದ ಎರಡನೇ ಟೆನಿಸ್ ತಾರೆ ಎನಿಸಿಕೊಂಡರು.

ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಸರ್ಬಿಯ ಆಟಗಾರ ಜೊಕೊವಿಕ್ ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕದ ಡಿಯಗೊ ಸ್ಚೆವರ್ಟ್‌ಮನ್‌ರನ್ನು ಎದುರಿಸಲಿದ್ದಾರೆ. ಅರ್ಜೆಂಟೀನದ ಡಿಯಗೊ ಸರ್ಬಿಯದ ಡುಸಾನ್ ಲಾಜೊವಿಕ್‌ರನ್ನು 6-2, 6-4, 7-6(9/7) ಸೆಟ್‌ಗಳ ಅಂತರದಿಂದ ಮಣಿಸಿದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ 8ನೇ ಹಾಗೂ ಒಟ್ಟಾರೆ 17ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಬೇಟೆಯಲ್ಲಿರುವ ಜೊಕೊವಿಕ್ ಪಥ್ಯಾಹಾರದಿಂದ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಜೊಕೊವಿಕ್ ಅವರು ರಫೆಲ್ ನಡಾಲ್(12 ಫ್ರೆಂಚ್ ಓಪನ್) ಹಾಗೂ ಫೆಡರರ್(8 ವಿಂಬಲ್ಡನ್)ಬಳಿಕ ಒಂದೇ ಟೂರ್ನಿಯಲ್ಲಿ 8 ಹಾಗೂ ಅದಕ್ಕಿಂತ ಹೆಚು್ಚ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಮೂರನೇ ಆಟಗಾರ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News