ಸಿಎಂ ಆಗಿ 100 ದಿನ ಪೂರೈಸಿದ ಬೆನ್ನಿಗೇ ಅಯೋಧ್ಯೆಗೆ ತೆರಳಲಿದ್ದಾರೆ ಉದ್ಧವ್ ಠಾಕ್ರೆ

Update: 2020-01-25 09:24 GMT

ಮುಂಬೈ, ಜ.25: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾ.7ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಶನಿವಾರ ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಎ)ಸರಕಾರದ ನೇತೃತ್ವ ವಹಿಸಿಕೊಂಡಿರುವ ಉದ್ಧವ್ ಠಾಕ್ರೆ ಅಧಿಕಾರ ಹಿಡಿದು 100 ದಿನಗಳನ್ನು ಪೂರೈಸಿದ ಬೆನ್ನಿಗೇ ಉತ್ತರಪ್ರದೇಶದಲ್ಲಿರುವ ಅಯೋಧ್ಯೆಗೆ ಭೇಟಿ ಕೊಡಲಿದ್ದಾರೆ ಎಂದು ಬುಧವಾರವೇ ರಾವತ್ ಘೋಷಿಸಿದ್ದರು. ಆದರೆ, ಆಗ ಅವರು ಯಾವಾಗ ಭೇಟಿ ನೀಡುತ್ತಾರೆಂದು ಸ್ಪಷ್ಟಪಡಿಸಿರಲಿಲ್ಲ.

ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಉದ್ಧವ್ ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಠಾಕ್ರೆ 2019ರ ನವೆಂಬರ್ 28ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News