ಎಲ್‍ಐಸಿಯ ಅನುತ್ಪಾದಕ ಸಾಲ 5 ವರ್ಷಗಳಲ್ಲಿ ದ್ವಿಗುಣ: 30,000 ಕೋಟಿ ರೂ.ಗೆ ಏರಿಕೆ

Update: 2020-01-25 09:25 GMT

ಹೊಸದಿಲ್ಲಿ: ಭಾರತದ ಸರಕಾರಿ ಸ್ವಾಮ್ಯದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ (ಎಲ್‍ಐಸಿ) ಇದರ ಅನುತ್ಪಾದಕ  ಸಾಲ ಅಥವಾ ಎನ್‍ ಪಿಎ ಪ್ರಮಾಣ ಆರ್ಥಿಕ ವರ್ಷ 2019-20ರ ಮೊದಲ ಆರು ತಿಂಗಳುಗಳಲ್ಲಿ (ಎಪ್ರಿಲ್-ಸೆಪ್ಟೆಂಬರ್) ಶೇ 6.10ರಷ್ಟಾಗಿದ್ದು ಇದು ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಎನ್‍ಪಿಎ ಪ್ರಮಾಣದಷ್ಟೇ ಇದೆ.  ಖಾಸಗಿ ಉದ್ದಿಮೆಗಳಿಗೆ ಸಾಲ ನೀಡಿ ಎಲ್‍ಐಸಿ ಇದೀಗ ಸಮಸ್ಯೆಗೆ ತುತ್ತಾಗಿದೆ.

ಸೆಪ್ಟೆಂಬರ್ 30, 2019ರಲ್ಲಿದ್ದಂತೆ ಎಲ್‍ಐಸಿಯ ಒಟ್ಟು ಎನ್‍ ಪಿಎ 30,000 ಕೋಟಿ ರೂ.ನಷ್ಟಿತ್ತು. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ. ಹಿಂದೆ ಎಲ್‍ಐಸಿಯ ಎನ್‍ಪಿಎ ಪ್ರಮಾಣ ಶೇ 1.5-ಶೇ 2ರಷ್ಟಿತ್ತು.

ಎಲ್‍ಐಸಿ  ಸಂಸ್ಥೆಯು ನಷ್ಟದಲ್ಲಿರುವ ಡೆಕ್ಕನ್ ಕ್ರಾನಿಕಲ್, ಎಸ್ಸಾರ್ ಶಿಪ್ಪಿಂಗ್, ಗ್ಯಾಮ್ಮನ್, ಐಎಲ್&ಎಫ್‍ಎಸ್, ಭೂಷಣ್ ಪವರ್, ವೀಡಿಯೋಕಾನ್ ಇಂಡಸ್ಟ್ರೀಸ್, ಅಲೋಕ್ ಇಂಡಸ್ಟ್ರೀಸ್, ಅಮ್ಟ್ರಕ್ ಆಟೋ, ಯುನಿಟೆಕ್, ಜಿವಿಕೆ ಪವರ್ ಹೀಗೆ ಇಂತಹ ಹಲವು ಕಂಪೆನಿಗಳಿಗೆ ಸೀಮಿತ ಅವಧಿಯ ಸಾಲ ನೀಡಿದೆ ಯಾ ಅವುಗಳಲ್ಲಿ ಹೂಡಿಕೆ ಮಾಡಿದೆ (ನಾನ್-ಕನ್ವರ್ಟಿಬಲ್ ಡಿಬೆಂಚರ್ಸ್). ಆದರೆ ಇವ್ಯಾವುದರಿಂದಲೂ ಎಲ್‍ಐಸಿ ಹೆಚ್ಚೇನೂ ಗಳಿಸುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News