ಭಾರತದಲ್ಲೂ ಕೊರೋನಾವೈರಸ್ ಆತಂಕ: ಕೇರಳದ 7 ಮಂದಿ ಸಹಿತ 11 ರೋಗಿಗಳು ವೈದ್ಯರ ನಿಗಾದಲ್ಲಿ

Update: 2020-01-25 09:29 GMT

ತಿರುವನಂತಪುರಂ: ಚೀನಾದಲ್ಲಿ 41 ಮಂದಿಯನ್ನು ಬಲಿ ಪಡೆದ ಹಾಗೂ 1,300ಕ್ಕೂ ಅಧಿಕ ಜನರನ್ನು ಬಾಧಿಸಿರುವ ಹೊಸ ಕೊರೋನಾವೈರಸ್  ಇದರ ಅಲ್ಪ ಲಕ್ಷಣಗಳು ಕಂಡು ಬಂದ 11 ಜನರನ್ನು ದೇಶದ ನಾಲ್ಕು ನಗರಗಳಲ್ಲಿ ವೈದ್ಯರ ನಿಗಾದಲ್ಲಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

ಈ 11 ಮಂದಿಯಲ್ಲಿ ಏಳು ಮಂದಿ ಕೇರಳದವರಾದರೆ, ಇಬ್ಬರು ಮುಂಬೈ ಹಾಗೂ ತಲಾ ಒಬ್ಬರು ಬೆಂಗಳೂರು ಹಾಗೂ ಹೈದರಾಬಾದ್ ನಗರದವರಾಗಿದ್ದು, ಪ್ರತ್ಯೇಕ ವಾರ್ಡ್‍ ಗಳಲ್ಲಿ ಅವರನ್ನು ಎಚ್ಚರಿಕೆಯ ಕ್ರಮವಾಗಿ ಇರಿಸಲಾಗಿದೆ.

ಕೇರಳದಲ್ಲಿ ಪ್ರತ್ಯೇಕ ವಾರ್ಡ್‍ ಗಳಲ್ಲಿರಿಸಲಾದವರು ಚೀನಾದಿಂದ ವಾಪಸಾದವರು ಎಂದು  ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಚೀನಾ ಮತ್ತು ಹಾಂಕಾಂಗ್ ನಿಂದ ವಾಪಸಾದ 20,000ಕ್ಕೂ ಅಧಿಕ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್‍ ಗೆ ಒಳಪಡಿಲಾಗಿದೆ.

ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗಿರುವ 11 ಮಂದಿಯ ಪೈಕಿ ಮುಂಬೈ ಆಸ್ಪತ್ರೆಯಲ್ಲಿರುವ ಇಬ್ಬರು ಹಾಗೂ ಹೈದರಾಬಾದ್ ಹಾಗೂ ಬೆಂಗಳೂರು ಆಸ್ಪತ್ರೆಯಲ್ಲಿರುವ ತಲಾ ಒಬ್ಬರ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

ಕೇರಳದಲ್ಲಿ ಆರೋಗ್ಯಾಧಿಕಾರಿಗಳು ಒಟ್ಟು 80 ಮಂದಿಯ ಮೇಲೆ ನಿಗಾ ಇರಿಸಿದ್ದು ,ಅವರಲ್ಲಿ 73 ಮಂದಿ ಕೊರೋನಾವೈರಸ್‍ನ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ.

ದೇಶದ ಹಲವು ಕಡೆಗಳಲ್ಲಿ ಆಸ್ಪತ್ರೆಗಳು ಪ್ರತ್ಯೇಕ ವಾರ್ಡ್ ಗಳನ್ನು ಸಜ್ಜಾಗಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News