ಕ್ಯಾರಿ ಬ್ಯಾಗ್ ಗೆ 12 ರೂ. ವಿಧಿಸಿದ ಶಾಪಿಂಗ್ ಮಾಲ್ ಗೆ 5 ಲಕ್ಷ ರೂ. ದಂಡ!

Update: 2020-01-25 11:16 GMT

ಚಂಡೀಗಢ: ಗ್ರಾಹಕರೊಬ್ಬರಿಗೆ ಕ್ಯಾರಿ ಬ್ಯಾಗ್ ಗೆ 12 ರೂ. ವಿಧಿಸಿದ ಚಂಡೀಗಢದ ಬಿಗ್ ಬಝಾರ್‍ ಗೆ ಅಲ್ಲಿನ ಗ್ರಾಹಕ ವೇದಿಕೆ  5 ಲಕ್ಷ ರೂ. ದಂಡ ವಿಧಿಸಿದೆ ಹಾಗೂ ಈ ಮೊತ್ತವನ್ನು ಬಡ ರೋಗಿಗಳ ಕಲ್ಯಾಣ ನಿಧಿಗೆ ಠೇವಣಿಯಿರಿಸುವಂತೆ ಹೇಳಿದೆ.

ದೂರುದಾರೆ ನೇಹಾ ಗೋಯೆಲ್ ಗೆ ಕ್ಯಾರಿ ಬ್ಯಾಗ್‍ ಗೆ ವಿಧಿಸಿದ 12 ರೂ., ಜತೆಗೆ ರೂ 100 ಪರಿಹಾರ ಹಾಗೂ ಪ್ರಕರಣದ ವೆಚ್ಚವಾಗಿ ರೂ 1,100 ಪಾವತಿಸುವಂತೆಯೂ ವೇದಿಕೆ ಆದೇಶಿಸಿದೆ.

ತಾನು ಚಂಡೀಗಢದ ಬಿಗ್ ಬಝಾರ್ ನಲ್ಲಿ ರೂ 1,198 ಮೌಲ್ಯದ ಉತ್ಪನ್ನಗಳನ್ನು ಖರೀದಿಸಿ ಬಿಲ್ಲಿಂಗ್ ಕೌಂಟರ್ ಗೆ ಹೋದಾಗ ಅಲ್ಲಿನ ಸಿಬ್ಬಂದಿ 12 ರೂ. ಕ್ಯಾರಿ ಬ್ಯಾಗ್ ವೆಚ್ಚವನ್ನೂ ಸೇರಿಸಿದ್ದ, ತಾನು ವಿರೋಧಿಸಿದಾಗ ಹಾಗೂ ಇದು ಅಕ್ರಮ ಎಂದಾಗ ಆತ ಕೇಳಲಿಲ್ಲ ಎಂದು ಗೋಯಲ್ ಹೇಳಿದ್ದಾರೆ. ನಂತರ ಅವರು ಜುಲೈ 1, 2019ರಲ್ಲಿ ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News