ಮಂಗಳೂರು : ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಗಣರಾಜ್ಯೋತ್ಸವ

Update: 2020-01-26 07:59 GMT

ಮಂಗಳೂರು : ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕರಾದ ವಂ. ವಿಲ್ಸನ್ ವೈಟಸ್ ಡಿಸೋಜಾ ಅವರು ಗಣರಾಜ್ಯೋತ್ಸವದ ಸಂದೇಶ ನೀಡಿ, ಶುಭಾಶಯ ಕೋರಿದರು.

ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಅರಿತು, ಉತ್ಸಾಹವನ್ನು ಗುರುತಿಸಿ ಅದಕ್ಕೆ ಪೂರಕವಾದ ಉತ್ತೇಜನವನ್ನು ನೀಡಿದಲ್ಲಿ ಹಾಗೂ ಶೈಕ್ಷಣಿಕವಾಗಿ ಬಲಿಷ್ಠಗೊಳಿಸಿದಲ್ಲಿ ಎಲ್ಲಾ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಹೆತ್ತವರು ಕೂಡ ತಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಬೆಳೆಸಿ, ಗುರು ಹಿರಿಯರಿಗೆ ಗೌರವ ನೀಡುವ ಶಿಸ್ತನ್ನು ಕಲಿಸಿದರೆ ಒಂದು ದಿನ ಅವರು ಕೂಡ ಹೆಮ್ಮೆಯಿಂದ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುವ ಸೌಭಾಗ್ಯವನ್ನು ಪಡೆಯುವರು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ವಂ. ರಾಬರ್ಟ್ ಡಿಸೋಜಾ, ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಮಿತ್ ಕುಲಾಸೊ ಸ್ವಾಗತಿಸಿ, ಪ್ರಗತಿ ರಾವ್ ಸ್ವಚ್ಛತಾ ದಿನದ ಪ್ರತಿಜ್ಞೆಯನ್ನು ಭೋದಿಸಿದರು. ಶ್ಲೋಕ ರೈ ಮತ್ತು ಶಹಾನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗೌರಿ ರವಿ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ವೈಶಾಖಿ ಭಟ್, ಆಶಾ ಶೇಟ್ ಮತ್ತು ಅಪೂರ್ವಶ್ರೀ ಕಾರ್ಯಕ್ರಮ ಸಂಯೋಜಿಸಿದರು. ವಿಯೋನ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News