ಮಂಗಳೂರು: ಇಕ್ರಾ ಅರಬಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ

Update: 2020-01-26 11:34 GMT

ಮಂಗಳೂರು : ಇಕ್ರಾ ಅರಬಿಕ್ ಸ್ಕೂಲ್ ವತಿಯಿಂದ ಗಣರಾಜ್ಯೋತ್ಸವ ಇಂದು ಆಚರಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲೆಯ ಸ್ಕೌಟ್ ಆ್ಯಂಡ್ ಗೈಡ್ಸ್ ನ ಮುಖ್ಯ ಕಮಿಷನರ್  ಎನ್.ಜಿ ಮೋಹನ್ ಅವರು ಮಾತನಾಡಿ, ದೇಶ ಸುಭದ್ರವಾಗಿರುವಾಗ ಕೆಲವು ವಿಕೃತ ಮನಸ್ಸುಗಳಿಂದ ದೇಶದ ಸ್ವಾಸ್ಥ್ಯ ಕಳೆದುಕೊಳ್ಳುವಂತಾಗಿದೆ. ನಾವು ಬಹಳ ಅನ್ಯೋನ್ಯತೆಯಿಂದ ಬೆರೆತು ಬಾಳುತ್ತಿದ್ದೆವು. ಮುಸ್ಲಿಮರು ಮತ್ತು ಹಿಂದೂಗಳು ಸಾಮರಸ್ಯವನ್ನು ಕಾಪಾಡಿಕೊಂಡು ಬಂದಂತಹ ನಾಡಾಗಿದೆ ದಕ್ಷಿಣ ಕನ್ನಡ ಜಿಲ್ಲೆ. ಈ ಸಾಮರಸ್ಯವನ್ನು ಕಾಪಾಡಿಕೊಂಡು ಮುಂದೆ ಸಾಗಬೇಕಾಗಿದೆ ಎಂದು ಅವರು ಸಂದೇಶ ನೀಡಿದರು.

ಬಿಸಿಸಿಐ ಮುಖ್ಯಸ್ಥ ಹಾಜಿ ಎಸ್ ಎಂ ರಶೀದ್ ಅವರು ಮಾತನಾಡಿ, ವಿದ್ಯೆ ಗಳಿಸಿ ಇತರರಿಗೆ ಪ್ರಯೋಜನಕಾರಿಯಾಗಿ, ಇಲ್ಲಿನ ಸೌಹಾರ್ದತೆಯನ್ನು ಕಾಪಾಡಿಕೊಂಡು ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಪ್ರಾಂಶುಪಾಲರಾದ ಮೌಲಾನಾ ಸಾಲಿಮ್ ನದ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಹಮ್ಮದ್ ಫರ್ಹಾನ್ ನದ್ವಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News