ಉಳ್ಳಾಲ: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

Update: 2020-01-26 10:57 GMT

ಉಳ್ಳಾಲ: ರಕ್ತದಾನ ಉತ್ತಮ ದಾನವಾಗಿದ್ದು, ಇದರಲ್ಲಿ ಜಾತಿ ಭೇದ ಎಂಬುದು ಇಲ್ಲ. ರೋಗಿಗೆ ರಕ್ತದಾನ ಮಾಡಬೇಕೆಂಬುದು ಎಸ್ಸೆಸ್ಸೆಫ್ ಬ್ಲಡ್ ಸೈಬೋದ ಗುರಿಯಾಗಿದೆ. ವಿವಿಧೆತೆಯಲ್ಲಿ ಏಕತೆ ನಮ್ಮಲ್ಲಿರ ಬೇಕು ಎಂದು ಎಸ್ಸೆಸ್ಸೆಫ್ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹೇಳಿದರು.

ಅವರು ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಬ್ಲಡ್ ಸೈಬೋ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ  ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಯೆನೆಪೋಯ ಮೆಡಿಕಲ್ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ  ಮಾಸ್ತಿಕಟ್ಟೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಭಾಷಣ ಮಾಡಿದರು.

ಶಾಸಕ ಯು‌.ಟಿ.ಖಾದರ್ ಮಾತನಾಡಿ, ಎಸ್ಸೆಸ್ಸೆಫ್ ಹಮ್ಮಿಕೊಂಡಿರುವ ರಕ್ತದಾನ ಶಿಬಿರವು ಮಾನವ ನ ಜೀವ ಉಳಿಸುವ ಕಾರ್ಯವಾಗಿದ್ದು, ಇದಕ್ಕೆ ಎಲ್ಲರೂ ಒತ್ತು ನೀಡಬೇಕು ಎಂದು ಕರೆ ನೀಡಿ, ಎಸ್ಸೆಸ್ಸೆಫ್ ನಾ ಕಾರ್ಯ ವೈಖರಿ ಬಗ್ಗೆ ಶ್ಲಾಘಿಸಿದರು.
ಸಯ್ಯದ್ ಜಲಾಲ್ ತಂಙಳ್ ದುವಾ ನೆರವೇರಿಸಿದರು.

ಬ್ಲಡಾ ಹೆಲ್ಪ್ ಕೇರ್ ಕರ್ನಾಟಕ ದ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಬೀರ್ ಪೇಟೆ ಅಧ್ಯಕ್ಷ ತೆ ವಹಿಸಿದ್ದರು. ಸಯ್ಯದ್ ಖುಬೈಬ್ ತಂಙಳ್, ಪಶ್ಚಿಮ ಘಟ್ಟ ಗಳು ಸಂರಕ್ಷಣಾ ಸಮಿತಿ ಮಾಜಿ ನಿರ್ದೇಶಕ ರಾಮ್ ಪ್ರಸಾದ್ ಬೆಂಗಳೂರು, ಬ್ಲಡ್ ಸೈಬೋ ಕನ್ವೀನರ್ ಹಕೀಂ ಪೂನಮ್, ಇಸ್ಮಾಯಿಲ್ ತಲಪಾಡಿ, ಉಳ್ಳಾಲ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಇಸ್ಮಾಯಿಲ್, ಪ್ರಸಾದ್ ನೇತ್ರಾವತಿ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೆ., ಮುಸ್ತಫಾ ಅಬ್ದುಲ್ಲಾ, ನಝೀರ್ ಹುಸೈನ್, ಹನೀಫ್ ಹಾಜಿ ಉಳ್ಳಾಲ,ಯು.ಎಸ್.ಲಾಜೀಸ್ಟಿಕ್ ಮಾಲಕ ಯು.ಎಸ್.ಹಸೈನಾರ್, ಮುಸ್ತಫಾ ಉಳ್ಳಾಲ,ನಾಝಿಂ ಮುಕಚೇರಿ, ಎಚ್ ಕೆ ಖಾದರ್,ಬಾ.ಶರೀಫ್ ಉಪಸ್ಥಿತರಿದ್ದರು. ಕರೀಂ ಕಡ್ಕರ್ ಸ್ವಾಗತಿಸಿದರು. ಸಂಶುದ್ದೀನ್ ಬಳ್ಕುಂಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News